ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದನ್ನು ಪರಿಗಣಿಸಿ ಜೊಯಿಡಾ ಹಾಗೂ ದಾಂಡೇಲಿ ತಾಲೂಕಿಗೆ ಮಾತ್ರ ಅನ್ವಯವಾಗುವಂತೆ ಶಾಲೆ-ಪ್ರೌಢಶಾಲೆ-ಅಂಗನವಾಡಿಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಹವಾಮಾನ ಇಲಾಖೆ ಮುನ್ಸೂಚನೆ, ತಹಶೀಲ್ದಾರ್ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಅನ್ವಯ ಈ ರಜೆ ನೀಡಲಾಗಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿದೇಶಕರು ಸಹ ರಜೆ ಅಗತ್ಯ ಎಂದು ಪ್ರತಿಪಾದಿಸಿದ ಹಿನ್ನಲೆ ಜಿಲ್ಲಾಡಳಿತ ಮಕ್ಕಳ ಸುರಕ್ಷತೆಗಾಗಿ ಈ ಎರಡು ತಾಲೂಕಿನ ಶಾಲೆಗಳಿಗೆ ರಜೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ ಇಲ್ಲ. ಆರೆಂಜ್ ಅಲರ್ಟ ಘೋಷಿಸಲಾಗಿದ್ದು, ಜಿಲ್ಲೆಯಾದ್ಯಂತ ಮಳೆ ಮುಂದುವರೆಯಲಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಅಂಕೋಲಾದಲ್ಲಿ 25 ಮಿಮೀ, ಭಟ್ಕಳದಲ್ಲಿ 12, ಹಳಿಯಾಳ 32.1 ಹೊನ್ನಾವರ 16.9 ಕಾರವಾರ 13.3 ಕುಮಟಾ 20.5 ಮುಂಡಗೋಡ 25 , ಸಿದ್ದಾಪುರ 88.8 ಶಿರಸಿ 58.2 ಸೂಪಾ 70.9 ಮಳೆಯಾಗಿದೆ. ಯಲ್ಲಾಪುರ 41.4, ದಾಂಡೇಲಿಯಲ್ಲಿ 46.6 ಮಿಲಿ ಮೀಟರ್ ಮಳೆ ಸುರಿದಿದೆ. ಈ ಅವಧಿಯಲ್ಲಿ 1 ಮನೆಗೆ ಪೂರ್ಣಹಾನಿ ಮತ್ತು 7 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
Discussion about this post