ಶಿವಾಜಿ ಮಹಾರಾಜರ ಕಾಲದಿಂದಲೂ ನೆಲೆನಿಂತಿರುವ ಭುವನೇಶ್ವರಿ ದೇವಿಗೆ ಯಲ್ಲಾಪುರದಲ್ಲಿ ದೇವಾಲಯ ಕಟ್ಟಲು ಸಂಕಲ್ಪ ಮಾಡಲಾಗಿದೆ. ಅಂಬೇಡ್ಕರ ನಗರದ ಜನರೆಲ್ಲ ಸೇರಿ ತಾಯಿ ದೇಗುಲ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.
1650ರ ಆಸುಪಾಸಿನಲ್ಲಿಅಂಬೇಡ್ಕರ್ ನಗರದಲ್ಲಿ ಭುವನೇಶ್ವರಿ ದೇವಿಯ ಆರಾಧನೆ ನಡೆಯುತ್ತಿತ್ತು. ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ಪರಿಶಿಷ್ಟ ಸಮುದಾಯದವರು ಈ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ಋಷಿಮುನಿಗಳಿಂದ ಬಳುವಳಿಯಾಗಿ ಬಂದ ದೇವಿ ಇದಾಗಿದ್ದು, ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧಿಪಡೆದಿತ್ತು. ನೆಲೆನಿಂತ ದೇವಿಗೆ ಕ್ರಮೇಣ ಪೂಜೆ – ಪುನಸ್ಕಾರಗಳು ಕಡಿಮೆಯಾದವು. ಅದರ ಪರಿಣಾಮ ಸಾವು-ನೋವುಗಳು ಸಂಭವಿಸಿದವು. ಕಷ್ಟಕಾಲದ ಬಗ್ಗೆ ಜ್ಯೋತಿಷ್ಯರಲ್ಲಿ ಪ್ರಶ್ನೆ ಕೇಳಿದಾಗ ದೇವಿ ಮಹಾತ್ಮೆ ಗೊತ್ತಾಯಿತು. ಹೀಗಾಗಿ ಊರಿನವರೆಲ್ಲರೂ ಸೇರಿ ದೇವಿಗೆ ದೇಗುಲ ನಿರ್ಮಿಸಲು ಉದ್ದೇಶಿಸಿದರು. ದೇವಿ ಇಚ್ಚೆ ಎಂಬoತೆ ಪುರಾತನ ಕಾಲದಲ್ಲಿ ಪೂಜಿಸುತ್ತಿದ್ದ ಕಲ್ಲು ಸಹ ಸಿಕ್ಕಿತು.
ಊರಿನವರೆಲ್ಲ ಸೇರಿ ಗ್ರಾಮದೇವಿ ಸನ್ನಿಧಾನಕ್ಕೆ ಬಂದರು. ಅಂಬೇಡ್ಕರ್ ನಗರದಲ್ಲಿ ಭುವನೇಶ್ವರಿ ದೇವಿ ಕಟ್ಟಡ ನಿರ್ಮಾಣದ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದರು. 25 ಲಕ್ಷ ರೂ ವೆಚ್ಚದಲ್ಲಿ ಶಿಲಾಮಯ ದೇಗುಲ ನಿರ್ಮಿಸುವ ಬಗ್ಗೆ ಚರ್ಚಿಸಿದರು. ಈ ಬಗ್ಗೆ ಸಮಿತಿ ರಚಿಸಿಕೊಂಡು ದೇಗುಲ ನಿರ್ಮಾಣದ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸಿದರು. ಸದ್ಯ ಹೊಸ ದೇಗುಲ ನಿರ್ಮಾಣ, ದೇವರ ಪುನರ್ ಪ್ರತಿಷ್ಠೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಲಾಗಿದೆ. ಈ ದೇಗುಲಕ್ಕೆ ಸರ್ವರಿಗೂ ತನು-ಧನ-ಮನ ಸಹಾಯ ನೀಡಲು ಅವಕಾಶವಿದ್ದು, ಭುವನೇಶ್ವರಿ ದೇವಿ ಸೇವೆ ಮಾಡಲಿಚ್ಚಿಸುವವರು ಇಲ್ಲಿ ಫೋನ್ ಮಾಡಿ: 9590973214
Discussion about this post