ಚಿನ್ನದ ಮೇಲೆ ಹೂಡಿಕೆ ಮಾಡಿ ಪ್ರತಿ ತಿಂಗಳು 70 ಸಾವಿರ ರೂ ಲಾಭಗಳಿಸಬಹುದು ಎಂಬ ಮಾತು ನಂಬಿದ ಭಟ್ಕಳದ ಅಬ್ದುಸ್ಸಲಾಂ ಗಫಾರ್ ಹಾಗೂ ನಸ್ರೀನ್ ಮಂಜಲ್ ಮೋಸ ಹೋಗಿದ್ದಾರೆ.
ದ ಭಟ್ಕಳದ ದಾರುಲ್ ಸಲಾಂ ರಸ್ತೆಯಲ್ಲಿ ಅಬ್ದುಸ್ಸಲಾಂ ಗಫಾರ್ ವಾಸವಾಗಿದ್ದರು. ನಸ್ರೀನ್ ಮಂಜಲ್ ರಸ್ತೆಯ ಮಹಮದ್ ಪೈಸ್ ಬದುಕು ಕಟ್ಟಿಕೊಂಡಿದ್ದರು. ಈ ಇಬ್ಬರಿಗೂ ಭಟ್ಕಳ ಕಾರಗದ್ದೆಯ ಅಬ್ದುಲ್ ರಹಿಂ ಸಾಹಬ ಹಾಗೂ ತಜೀಂ ರಸ್ತೆಯ ನವಯಿತ ಕಾಲೋನಿಯ ಅಲಿ ಮೊಮಿನ ಪರಿಚಿತರಾದರು.
`ಕುಂದಾಪುರದಲ್ಲಿರು ಗೋಲ್ಡ್ ಜ್ಯುವೆಲರ್ ಮಳಿಗೆಯಲ್ಲಿ 2 ಕೆಜಿ ಬಂಗಾರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 70 ಸಾವಿರ ರೂಪಾಯಿಯವರೆಗೆ ಲಾಭ ಸಿಗುತ್ತದೆ’ ಎಂದು ಅಬ್ದುಲ್ ರಹಿಂ ಸಾಹಬ ಹಾಗೂ ಅಲಿ ಮೊಮಿನ ಹೇಳಿದರು. ಹಣದ ಆಸೆಗೆ ಬಿದ್ದ ಅಬ್ದುಸ್ಸಲಾಂ ಗಫಾರ್ ಹಾಗೂ ನಸ್ರೀನ್ ಮಂಜಲ್ ತಮ್ಮ ಬಳಿಯಿದ್ದ ಒಂದೊAದು ಕೆಜಿ ಬಂಗಾರವನ್ನು ಅಬ್ದುಲ್ ರಹಿಂ ಸಾಹಬ ಹಾಗೂ ಅಲಿ ಮೊಮಿನ ಅವರ ಕೈಗೆ ಕೊಟ್ಟರು.
ಮೊದಲ ಒಂದು ವರ್ಷಗಳ ಕಾಲ ಅಬ್ದುಲ್ ರಹಿಂ ಸಾಹಬ ಹಾಗೂ ಅಲಿ ಮೊಮಿನ ನುಡಿದಂತೆ ನಡೆದರು. 70 ಸಾವಿರದ ಬದಲು ಇಬ್ಬರಿಗೂ ಸೇರಿ ಸುಮಾರು 50 ಸಾವಿರ ರೂ ಲೆಕ್ಕಾಚಾರದಲ್ಲಿ ಹಣ ಪಾವತಿಸುತ್ತ ಬಂದರು. ಒಟ್ಟು 8.10 ಲಕ್ಷ ರೂ ಹಣ ಪಾವತಿ ಮುಗಿದ ನಂತರ ಅವರಿಬ್ಬರೂ ಕೈ ಎತ್ತಿದರು. 20 ಲಕ್ಷ ರೂ ಮೌಲ್ಯದ ಬಂಗಾರವನ್ನು 8.10 ಲಕ್ಷ ಹಣಪಡೆದು ಕೊಟ್ಟಿದ್ದ ಅಬ್ದುಸ್ಸಲಾಂ ಗಫಾರ್ ಹಾಗೂ ನಸ್ರೀನ್ ಮಂಜಲ್ ತಲೆ ಮೇಲೆ ಕೈ ಹೊತ್ತು ಕುಳಿತರು.
ಮತ್ತೆ ಹೋಗಿ ಕೇಳಿದರೂ ಅಬ್ದುಲ್ ರಹಿಂ ಸಾಹಬ ಹಾಗೂ ಅಲಿ ಮೊಮಿನ ಹಣ ಕೊಡಲಿಲ್ಲ. ಲಾಭಾಂಶವನ್ನು ವಿತರಿಸಲಿಲ್ಲ. ಮೊದಲು ನೀಡಿದ್ದ ಬಂಗಾರವನ್ನು ಮರಳಿ ಕೊಡಲಿಲ್ಲ. ಮೋಸ ಹೋಗಿರುವುದನ್ನು ಅರಿತ ಅಬ್ದುಸ್ಸಲಾಂ ಗಫಾರ್ ಹಾಗೂ ನಸ್ರೀನ್ ಮಂಜಲ್ ಅನಿವಾರ್ಯವಾಗಿ ಪೊಲೀಸ್ ದೂರು ನೀಡಲು ನಿರ್ಧರಿಸಿದರು. ಅಬ್ದುಸ್ಸಲಾಂ ಗಫಾರ್ ಅವರು ಕಾರವಾರದ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ವಂಚಕರ ವಿರುದ್ಧ ದೂರು ನೀಡಿದರು.
Discussion about this post