ಕುಮಟಾದ ಕಡಲತೀರದಲ್ಲಿ ನೀಲಿ ತಿಮಿಂಗಲ ಕಾಣಿಸಿಕೊಂಡಿದೆ. ಆದರೆ, ಆ ಮೀನು ಜೀವಂತವಾಗಿಲ್ಲ.
ಆಳ ಸಮುದ್ರದಲ್ಲಿ ಸಾವನಪ್ಪಿದ ತಿಮಿಂಗಲದ ಕಳೆಬರಹ ಕುಮಟಾದ ವನ್ನಳ್ಳಿ ತೀರಕ್ಕೆ ಆಗಮಿಸಿದೆ. ನೀಲಿ ಬಣ್ಣದ ತಿಮಿಂಗಲ ನೋಡಿದ ಮೀನುಗಾರರು ಅಚ್ಚರಿವ್ಯಕ್ತಪಡಿಸಿದ್ದು, ಅನೇಕರು ಆಗಮಿಸಿ ದೊಡ್ಡ ಆಕಾರದ ಮೀನು ವೀಕ್ಷಿಸಿದರು.
ಕಡಲತೀರಕ್ಕೆ ಅಪ್ಪಳಿಸಿದ ತಿಮಿಂಗಲ 13 ಮೀಟರ್ ಉದ್ದವಿತ್ತು. 10 ಟನ್ ತೂಕವಿತ್ತು. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದರಿಂದ ಗಬ್ಬು ವಾಸನೆ ಬರುತ್ತಿತ್ತು. ಒಂದು ವಾರದ ಹಿಂದೆಯೇ ಈ ಮೀನು ಸಾವನಪ್ಪಿರುವ ಅನುಮಾನಗಳಿವೆ.
ADVERTISEMENT
ಈ ತಿಮಿಂಗಲ ಪೂರ್ಣ ಪ್ರಮಾಣದ ಬೆಳವಣಿಗೆ ಹೊಂದಿರಲಿಲ್ಲ. ಅದಾಗಿಯೂ ಅದರ ದೇಹದ ಭಾಗಗಳು ಅಲ್ಲಲ್ಲಿ ತುಂಡಾಗಿರುವ ಕುರುಹು ಕಾಣಿಸಿತು. ಸಾವಿಗೆ ಕಾರಣ ತಿಳಿಯಲು ಕುಂದಾಪುರದ ರೀಪ್ ವಾಚ್ ಸಂಸ್ಥೆಯವರು ಕುಮಟಾಗೆ ಆಗಮಿಸಿದ್ದಾರೆ. ಅಲ್ಲಿನ ತಜ್ಞರಿಗೂ ಸಾವಿನ ಕಾರಣ ಗೊತ್ತಾಗಿಲ್ಲ.
ಬುಧವಾರ ಈ ತಿಮಿಂಗಲ ಕಾಣಿಸಿಕೊಂಡಿದ್ದು, ಅಧ್ಯಯನದ ನಂತರ ಗುರುವಾರ ಅದನ್ನು ಮಣ್ಣು ಮಾಡಲಾಗಿದೆ.
Discussion about this post