ಕುಮಟಾದ ರಾಮಚಂದ್ರ ಪಟಗಾರ್ ಅವರ ಬೈಕು ಕಳ್ಳತನವಾಗಿದೆ. ಹ್ಯಾಂಡ್‌ಲಾಕ್ ಮಾಡಿದ್ದರೂ ಅದನ್ನು ಮುರಿದು ಕಳ್ಳರು ಬೈಕ್ ಅಪಹರಿಸಿದ್ದಾರೆ.
ಕುಮಟಾದ ಸುವರ್ಣಗದ್ದೆ ಹೊರಭಾಗದಲ್ಲಿ ವಾಸವಾಗಿರುವ ರಾಮಚಂದ್ರ ಪಟಗಾರ್ ಅವರು ಖಾಸಗಿ ಕಂಪನಿ ಉದ್ಯೋಗಿ. ತಮ್ಮ ಓಡಾಟಕ್ಕಾಗಿ ಅವರು ಹೀರೋ ಕಂಪನಿಯ ಸ್ಪಾಂಡ್ಲರ್ ಪ್ಲಸ್ ಬೈಕ್ ಖರೀದಿಸಿದ್ದರು. ಫೆ 13ರ ರಾತ್ರಿ 10 ಗಂಟೆಗೆ ಅವರು ಆ ಬೈಕನ್ನು ಮನೆ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದರು. ಮರುದಿನ ಎದ್ದು ನೋಡಿದಾಗ ಬೈಕ್ ಇರಲಿಲ್ಲ.
ADVERTISEMENT
ಸಾಕಷ್ಟು ಕಡೆ ಬೈಕಿನ ಹುಡುಕಾಟ ನಡೆಸಿದರು. ಆದರೆ, ಎಲ್ಲಿಯೂ ಬೈಕ್ ಸಿಗಲಿಲ್ಲ. ಕಳ್ಳರ ಬಗ್ಗೆಯೂ ಮಾಹಿತಿ ಗೊತ್ತಾಗಲಿಲ್ಲ. ಇಷ್ಟು ದಿನ ಬೈಕ್ ಸಿಗಬಹುದು ಎಂದು ಕಾದ ಅವರು ಬೈಕ್ ಸಿಗದ ಕಾರನ ಕುಮಟಾ ಪೊಲೀಸ್ ಠಾಣೆಗೆ ಬಂದರು. ಬೈಕಿನ ಗುರುತು ಹೇಳಿ ಕಾಣೆಯಾದ ಬೈಕ್ ಹುಡುಕಿಕೊಡಿ ಎಂದು ಮನವಿ ಮಾಡಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೈಕ್ ಹುಡುಕುವ ಭರವಸೆ ನೀಡಿದ್ದಾರೆ. ಕುಮಟಾ ಪೊಲೀಸರಿಂದ ಬೈಕ್ ಕಳ್ಳನ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
Discussion about this post