ಕಾರವಾರದ ನಾಗರಮುಡಿ ಜಲಪಾತದ ಬಳಿ ಅಮಲು ಪದಾರ್ಥ ಸೇವಿಸುತ್ತಿದ್ದ ಸ್ಥಳೀಯ ಪ್ರವಾಸಿಗರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಮುದುಗಾ ಸೀಬರ್ಡ ಕಾಲೋನಿಯ ರಾಜೇಶ ಮಾಜಾಳಿಕರ್ ಅವರು ಜೂನ್ 25ರಂದು ಚೆಂಡಿಯಾ ಬಳಿಯ ನಾಗರಮುಡಿ ಜಲಪಾತಕ್ಕೆ ಹೋಗಿದ್ದರು. ಅಲ್ಲಿ ಅವರು ಅಮಲಿನಲ್ಲಿದ್ದು, ಅನುಚಿತವಾಗಿ ವರ್ತಿಸುತ್ತಿದ್ದರು. ಈ ವಿಷಯ ಅರತ ಕಾರವಾರ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಪಾಟೀಲ ಅವರು ರಾಜೇಶ ಮಾಜಾಳಿಕರ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.
ನಾಗರಮುಡಿ ಜಲಪಾತದಲ್ಲಿ ಈ ವೇಳೆ ಅಂಕೋಲಾ ಹಾರವಾಡದ ಸುನೀಲ ಆಚಾರಿ ಸಹ ಅಮಲಿನಲ್ಲಿರುವುದು ಗೊತ್ತಾಯಿತು. ಸುನೀಲ ಆಚಾರಿ ಸಹ ಸದ್ಯ ಸೀಬರ್ಡ ಕಾಲೋನಿಯಲ್ಲಿ ವಾಸವಾಗಿದ್ದು, ಪಿಎಸ್‌ಐ ಮಂಜುನಾಥ ಪಾಟೀಲ ಅವರು ಸುನೀಲ ಆಚಾರಿ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕರೆ ತಂದರು.
ತೋಡೂರು ಸೀಬರ್ಡ ಕಾಲೋನಿಯ ಘಣಶ್ಯಾಮ ಗೌಡ ಅವರು ಅದೇ ದಿನ ಬಿಣಗಾ – ರಾಮನಗರ ರಸ್ತೆಯಲ್ಲಿ ಅಲೆದಾಡುತ್ತಿದ್ದರು. ಘಣಶ್ಯಾಮ ಗೌಡ ಅವರ ಅನುಚಿತ ವರ್ತನೆ ಗಮನಿಸಿದ ಪೊಲೀಸ್ ಉಪನಿರೀಕ್ಷಕ ನೇಹಾಲ್ ಖಾನ್ ಅವರು ಗೌಡರನ್ನು ಆಸ್ಪತ್ರೆಗೆ ಕರೆತಂದರು.
ವೈದ್ಯಕೀಯ ಪರೀಕ್ಷೆಯಲ್ಲಿ ಈ ಮೂವರು ಗಾಂಜಾ ಸೇವಿಸಿರುವುದು ದೃಢವಾಯಿತು. ವೈದ್ಯರು ನೀಡಿದ ವರದಿ ಆಧಾರದಲ್ಲಿ ಆ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
Discussion about this post