ಮುಂಡಗೋಡಿನ ಸಾಲಗಾಂವ ಗ್ರಾಮ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ 9 ಸದಸ್ಯರು ಅವಿಶ್ವಾಸವ್ಯಕ್ತಪಡಿಸಿದ್ದಾರೆ. ಅವಿಶ್ವಾಸ ಮಂಡನೆಗೆ ವಿಶೇಷ ಸಭೆ ಕರೆಯುವಂತೆ ಅಲ್ಲಿನ ಸದಸ್ಯರು ಶಿರಸಿ ಉಪವಿಭಾಗಾಧಿಕಾರಿಗಳ ಮೊರೆ ಹೋಗಿದ್ದಾರೆ.
ಸಾಲಗಾಂವ ಗ್ರಾಮ ಪಂಚಾಯತ ಒಟ್ಟು 13 ಸದಸ್ಯರಿದ್ದಾರೆ. ಅವರಲ್ಲಿ ಗಣಪತಿ ಬಾಳಮ್ಮನವರ ಅವರು ಅಧ್ಯಕ್ಷರಾಗಿದ್ದು, ರೇಖಾ ಹರಿಜನ ಅವರು ಉಪಾಧ್ಯಕ್ಷರಾಗಿದ್ದಾರೆ. `ಅಧ್ಯಕ್ಷ-ಉಪಾಧ್ಯಕ್ಷರು ಮೊದಲಿನ ಹಾಗೇ ಇಲ್ಲ. ಅವರ ನಡವಳಿಕೆ ಸಂಪೂರ್ಣ ಬದಲಾಗಿದ್ದು, ಸದಸ್ಯರನ್ನು ವಿಶ್ವಾಸಕ್ಕೆಪಡೆಯುತ್ತಿಲ್ಲ’ ಎಂಬುದು 9 ಸದಸ್ಯರ ದೂರು.
ADVERTISEMENT
`ಅಧ್ಯಕ್ಷ-ಉಪಾಧ್ಯಕ್ಷರು ಕೆಲ ವಿಷಯಗಳನ್ನು ಅವರು ಯಾರಿಗೂ ಹೇಳುತ್ತಿಲ್ಲ. ವಾಸ್ತವ ಮಾಹಿತಿ ನೀಡುತ್ತಿಲ್ಲ. ಅನೇಕ ವಿಷಯದಲ್ಲಿ ಅವರು ಏಕಪಕ್ಷೀಯ ನಿರ್ಣಯಕೈಗೊಳ್ಳುತ್ತಿದ್ದು, ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದ್ದಾರೆ’ ಎಂದು ಅಲ್ಲಿನ 9 ಸದಸ್ಯರು ದೂರಿದ್ದಾರೆ.
Discussion about this post