ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ ಲಕ್ಷ್ಮೀಶ್ ನಾಯ್ಕ ಅವರ ವರ್ಗಾವಣೆಗೆ ವಿರೋಧವ್ಯಕ್ತವಾಗಿದೆ.
ಡಾ ಲಕ್ಷ್ಮೀಶ್ ನಾಯ್ಕ ಅವರನ್ನು ವರ್ಗಾವಣೆ ರದ್ಧುಪಡಿಸಬೇಕು ಎಂದು ಕರ್ನಾಟಕ ರಣಧೀರರ ವೇದಿಕೆ ಆಗ್ರಹಿಸಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೂ ವೇದಿಕೆಯವರು ಪತ್ರ ರವಾನಿಸಿದ್ದಾರೆ.
ADVERTISEMENT
ಡಾ ಲಕ್ಷ್ಮೀಶ್ ನಾಯ್ಕ ಅವರು ಹಲವು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ವಿಷಕಾರಿ ಹಾವು ಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. 24 ಗಂಟೆಗಳ ಕಾಲವೂ ಔಷಧೋಪಚರ ನೀಡಿ ಬಡವರ ಸೇವೆ ಮಾಡುತ್ತಿದ್ದಾರೆ. ಅವರ ವರ್ಗಾವಣೆ ನಡೆದರೆ ಜನರಿಗೆ ಸಮಸ್ಯೆಯಾಗಲಿದೆ’ ಎಂದು ಹೋರಾಟಗಾರರು ವಿವರಿಸಿದ್ದಾರೆ.
ಕರ್ನಾಟಕ ರಣಧೀರರ ವೇದಿಕೆಯವರು ತಾಲೂಕಾ ಆಡಳಿತ ವೈದ್ಯಾಧಿಕಾರಿಗಳ ಮೂಲಕ ಆರೋಗ್ಯ ಸಚಿವರಿಗೆ ಮನವಿ ರವಾನಿಸಿದರು. ಈ ವೇಳೆ ವೇದಿಕೆ ಪ್ರಮುಖರಾದ ಮಂಜುನಾಥ ನಾಯ್ಕ, ನಾಗೇಶ್ ಹರಿಕಾಂತ್, ರಾಜೇಶ್ ಆಚಾರ್ಯ, ರತ್ನಾಕರ ನಾಯ್ಕ, ಲೋಕೇಶ್ ನಾಯ್ಕ ,ಅಂಥೋನಿ ಲೂಯಿಸ್, ಶ್ರೀಧರ್ ಹರಿಕಾಂತ ಇದ್ದರು.
Discussion about this post