ದೇವನಹಳ್ಳಿ ಚನ್ನರಾಯಪಟ್ಟಣದಲ್ಲಿ 13 ಗ್ರಾಮಗಳ ಭೂ ಸ್ವಾಧೀನ ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ಎಸಗಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತರಾಮ ನಾಯಕ ಅವರು ಖಂಡಿಸಿದ್ದಾರೆ.
`ಕಾರ್ಪೋರೇಟ್ ಕಂಪನಿಗಳ ಒಳಿತಿಗಾಗಿ ಸರ್ಕಾರ ಬಡ ರೈತರ ಹಕ್ಕು ಕಸಿಯುತ್ತಿದೆ. ಸರ್ಕಾರದ ಒತ್ತಡಕ್ಕೆ ಕಿವಿಕೊಡದೇ ಪ್ರತಿಭಟಿಸಿದವರ ಮೇಲೆ ಪೊಲೀಸರಿಂದ ದಬ್ಬಾಳಿಕೆ ನಡೆಸಲಾಗಿದೆ. ಜೂನ್ 25ರಂದು ಶಾಂತಿಯುತ ಪ್ರತಿಭಟನೆ ನಡೆಸಿದರೂ ಅವರನ್ನು ಅನಗತ್ಯವಾಗಿ ಬಂಧಿಸಲಾಗಿದೆ. ಈ ಕ್ರಮ ಸರಿಯಲ್ಲ’ ಎಂದು ಶಾಂತರಾಮ ನಾಯಕ ಅವರು ಹೇಳಿದ್ದಾರೆ.
`ರೈತರ ನ್ಯಾಯಯುತ ಒತ್ತಾಯಕ್ಕೆ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ರಾಜ್ಯದ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಸಾವಿರಾರು ಜನ ಪ್ರತಿಭಟನೆಯಲ್ಲಿದ್ದಾರೆ. ಜನ ವಿರೋಧಿ ನೀತಿಯನ್ನು ಒಕ್ಕೂರಲಿನಿಂದ ಖಂಡಿಸಲಾಗುತ್ತದೆ’ ಎಂದವರು ಹೇಳಿದ್ದಾರೆ. `ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರ ವರ್ತನೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಖಂಡಿಸುತ್ತದೆ’ ಎಂದವರು ಹೇಳಿದ್ದಾರೆ.
`ಸಂಘಟನೆಯ ರಾಜ್ಯ ಅಧ್ಯಕ್ಷ ಯು ಬಸವರಾಜ್, ಪ್ರಧಾನ ಕಾರ್ಯದರ್ಶಿ ಡಿ ಯಶವಂತ, ಜಂಟಿ ಕಾರ್ಯದರ್ಶಿ ನವೀನ ಕುಮಾರ, ರೈತ ಮುಖಂಡ ಬಡಗಲಪುರ ನಾಗೇಂದ್ರ, ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ದೇವಿ, ಉಪಾಧ್ಯಕ್ಷರಾದ ಗೌರಮ್ಮ, ಕೆ ಎಸ್ ಲಕ್ಷ್ಮಿ ಅವರು ರೈತರ ಬೆಂಬಲಕ್ಕಿದ್ದಾರೆ. ಕಾರ್ಮಿಕ ಮುಖಂಡರಾದ ಎಸ್ ವರಲಕ್ಷ್ಮಿ, ಮೀನಾಕ್ಷಿ ಸುಂದರo ಅವರು ಬೆಂಬಲ ನೀಡಿದ್ದು, ಅವರೆಲ್ಲರನ್ನು ಬಂಧಿಸಿರುವುದು ಸರಿಯಲ್ಲ’ ಎಂದು ಶಾಂತರಾಮ ನಾಯಕ ಅವರು ಹೇಳಿದ್ದಾರೆ.
Discussion about this post