ಶಾಲೆಗೆ ಹೋಗುವ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಗುತ್ತಿಗೆದಾರನ ವಿರುದ್ಧ ಕುಮಟಾ ಕಾರ್ಮಿಕ ನಿರೀಕ್ಷಕರು ಕಠಿಣ ಕ್ರಮ ಜರುಗಿಸಿದ್ದಾರೆ. ಗುತ್ತಿಗೆದಾರನ ಬಳಿ ಮೂವರು ಮಕ್ಕಳು ದುಡಿಯುತ್ತಿದ್ದು, ಅವರನ್ನು ಅಧಿಕಾರಿಗಳು ಕೆಲಸದಿಂದ ಬಿಡಿಸಿದ್ದಾರೆ.
ಗೋಕರ್ಣ ಬಸ್ ನಿಲ್ದಾಣದ ಬಳಿ ಕೆಎಸ್‌ಆರ್‌ಟಿಸಿ ಸಂಸ್ಥೆಯ ಜಾಗವಿದ್ದು, ಈ ಜಾಗವನ್ನು ಸಾರಿಗೆ ನಿಗಮ ಲೀಸ್ ಆಧಾರದಲ್ಲಿ ನೀಡಿದೆ. ವಿಜಯಪುರದ ವ್ಯಕ್ತಿಯೊಬ್ಬರು ಇಲ್ಲಿ ವಸತಿಗೃಹ ನಿರ್ಮಾಣ ಕಾರ್ಯ ನಡೆಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಅವರು ಪಶ್ಚಿಮ ಬಂಗಾಳದ ಗುತ್ತಿಗೆದಾರ ಇಂತಿಕಾಮ್ ಮೊತೀನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಇಂತಿಕಾಮ್ ಮೊತೀನ್ ಅವರು ಶಾಲಾ ಮಕ್ಕಳನ್ನು ಕಟ್ಟಡ ನಿರ್ಮಾಣ ಕೆಲಸಕ್ಕೆ ಬಳಸಿಕೊಂಡಿದ್ದಾರೆ.
ಅಪಾಯಕಾರಿ ರೀತಿಯ ಕೆಲಸದಲ್ಲಿ ತೊಡಗಿದ್ದ ಮಕ್ಕಳನ್ನು ಕುಮಟಾದ ಕಾರ್ಮಿಕ ನಿರೀಕ್ಷಕ ಡಿ ಎಂ ವೆಂಕಟೇಶಬಾಬು ರಕ್ಷಿಸಿದರು. ಉತ್ತರ ಪ್ರದೇಶದ ಸಣದೀಪ (11 ವರ್ಷ) ಗೋರಲು (13 ವರ್ಷ) ಹಾಗೂ ಪಾವನ (15 ವರ್ಷ) ಅಲ್ಲಿ ದುಡಿಯುತ್ತಿದ್ದು, (ಮಕ್ಕಳ ಹೆಸರು ಬದಲಿಸಿದೆ) ಗುತ್ತಿಗೆದಾರನ ಕಾಟದಿಂದ ಅವರು ತಪ್ಪಿಸಿಕೊಂಡರು. ಗುತ್ತಿಗೆದಾರನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
Discussion about this post