ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ ಶ್ರೀನಿವಾಸ್ ನಾಯಕ ಹಾಗೂ ಡಾ ಪಾಂಡುರoಗ ದೇವಾಡಿಗ ಅವರ ವರ್ಗಾವಣೆಗೆ ವಿರೋಧವ್ಯಕ್ತವಾಗಿದೆ. ಆರೋಗ್ಯ ಇಲಾಖೆಯ ಕ್ರಮ ಖಂಡಿಸಿ ಶುಕ್ರವಾರ ಅನೇಕ ಸಂಘಟನೆಯವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
`ಡಾ ಶ್ರೀನಿವಾಸ ನಾಯಕ ಹಾಗೂ ಡಾ ಪಾಂಡುರAಗ ದೇವಾಡಿಗ ಅವರು ಉತ್ತಮ ಸೇವೆ ನೀಡುತ್ತಿದ್ದಾರೆ. ಅವರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ನ್ಯಾಯ ಸಿಗುತ್ತಿದ್ದು, ಅವರನ್ನು ವರ್ಗಾವಣೆ ಮಾಡಬಾರದು’ ಎಂದು ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ಹೇಮಂತ ಗಾಂವ್ಕರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಅಧ್ಯಕ್ಷ ರಾಜು ನಾಯ್ಕ ಆಗ್ರಹಿಸಿದರು.
`ಡಾ ಶ್ರೀನಿವಾಸ ನಾಯಕ ಅವರ ಸೇವೆ ಎರಡುವರೆ ವರ್ಷದಲ್ಲಿ ಮುಕ್ತಾಯವಾಗಲಿದೆ. ನಿವೃತ್ತಿ ಅವಧಿಯಲ್ಲಿ ಅವರ ವರ್ಗಾವಣೆ ಎಲ್ಲರಿಗೂ ಬೇಸರ ತಂದಿದೆ. ಇಬ್ಬರ ಸೇವೆಯನ್ನು ಇಲ್ಲಿಯೇ ಮುಂದುವರೆಸಬೇಕು’ ಎಂದು ಕಲಾಗಂಗೋತ್ರಿಯ ಗಣೆಶ ಭಟ್ಟ, ಶ್ರೀಧರ ನಾಯ್ಕ, ಪುರಸಭೆ ಸದಸ್ಯರಾದ ಸೂರ್ಯಕಾಂತ ಗೌಡ ಒತ್ತಾಯಿಸಿದರು.
ಪ್ರಮುಖರಾದ ತುಳಸು ಗೌಡ, ಎಂ ಎನ್ ಭಟ್ಟ, ದಿನೇಶ ನಾಯ್ಕ, ಜಿ ಕೆ ಹೆಗಡೆ, ನಿತಿನ್ ಗೌರಯ್ಯ, ನ್ಯಾಯಾವಾದಿ ಮಂಗಲಮೂರ್ತಿ ಸಭಾಯಿತ, ನಾಗರಾಜ ಹೆಗಡೆ ಇತರರು ಮನವಿ ಸಲ್ಲಿಸಿದರು.
Discussion about this post