ಮೇಷ ರಾಶಿ: ನಿಮಗೆ ಇಂದು ಸಂತೋಷದ ದಿನ. ನೆಮ್ಮದಿಯ ವಾತಾವರಣ. ಸಮೃದ್ಧಿಯೂ ಹೆಚ್ಚಳವಾಗುವ ಸಾಧ್ಯತೆಯಿದೆ.
ವೃಷಭ ರಾಶಿ: ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಹಣಕಾಸಿನ ವ್ಯವಹಾರದಲ್ಲಿ ಆತುರ ಬೇಡ. ಎಚ್ಚರಿಕೆಯಿಂದ ವ್ಯವಹರಿಸಿ.
ಮಿಥುನ ರಾಶಿ: ದಾಂಪತ್ಯ ಜೀವನ ಸುಖಮಯವಾಗಿ ಇರುತ್ತದೆ. ಸಂಗಾತಿ ಜೊತೆ ಸಮಯ ಕಳೆಯುವಿರಿ. ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಪ್ತರಲ್ಲಿ ಚರ್ಚಿಸಿ.
ಕಟಕ ರಾಶಿ: ಕೌಟುಂಬಿಕ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ಉದ್ಯೋಗದ ಸುದ್ದಿ ಬರಲಿದೆ. ಉದ್ಯೋಗ ವಿಷಯದಲ್ಲಿ ಯೋಗ್ಯ ಆಯ್ಕೆ ನಡೆಸಿ.
ಸಿಂಹ ರಾಶಿ: ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಿ. ಆರೋಗ್ಯದ ಬಗ್ಗೆಯೂ ಕಾಳಜಿಯಿರಲಿ. ಈ ದಿನ ನಿಮಗೆ ಶುಭ ದಿನ.
ಕನ್ಯಾ ರಾಶಿ: ಅನಗತ್ಯ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಕುಟುಂಬದವರ ಜೊತೆ ಕಾಲ ಕಳೆಯಲು ಸಮಯಕೊಡಿ.
ತುಲಾ ರಾಶಿ: ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆಯಿದೆ. ತಾಳ್ಮೆ ಕಳೆದುಕೊಳ್ಳಬೇಡಿ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ವೃಶ್ಚಿಕ ರಾಶಿ: ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ. ಹೊಸ ಆದಾಯದ ಮೂಲ ಸೃಷ್ಠಿಯಾಗುತ್ತದೆ.
ಧನು ರಾಶಿ: ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಸಾಕಷ್ಟು ಚಿಂತೆ ಮಾಡಬೇಡಿ. ಆತ್ಮ ವಿಶ್ವಾಸದಿಂದ ಇದ್ದರೆ ಕಷ್ಟ ಎದುರಿಸಲು ಸಾಧ್ಯ.
ಮಕರ ರಾಶಿ: ಕುಟುಂಬದ ಖರ್ಚು-ವೆಚ್ಚಗಳನ್ನು ಸರಿಯಾಗಿ ನಿಭಾಯಿಸಿ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಿದೆ. ಶೈಕ್ಷಣಿಕ ವೃತ್ತಿಯಲ್ಲಿರುವವರಿಗೆ ಸಣ್ಣಪುಟ್ಟ ಸಮಸ್ಯೆ ಸಾಮಾನ್ಯ. ಚಿಂತೆ ಬೇಡ.
ಕುಂಭ ರಾಶಿ: ವ್ಯಾಪಾರದಲ್ಲಿ ಒಳ್ಳೆಯ ಲಾಭವಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ.
ಮೀನ ರಾಶಿ: ಭಾವನೆಗಳಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಹೆಚ್ಚಿದೆ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಹಣವ್ಯಯವಾಗುವ ಸಾಧ್ಯತೆಗಳಿವೆ.
Discussion about this post