ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಬದಲಾಗಿದ್ದಾರೆ. ಅಂಕೋಲಾ ಮೂಲದ ದಯಾನಂದ ನಾಯ್ಕ ಅವರು ಶೈಕ್ಷಣಿಕ ಸೇವೆಗಾಗಿ ಜಿಲ್ಲೆಗೆ ಆಗಮಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೊಬ್ರುವಾಡ ಬಳಿಯ ಬೇಳ ಬಂದರ್‌ನ ದಯಾನಂದ ನಾಯ್ಕ ಅವರು ಶೈಕ್ಷಣಿಕವಾಗಿ ಅತ್ಯಂತ ಶಿಸ್ತಿನ ಮನುಷ್ಯ. ಮಂಗಳೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದಾಗ ಅನೇಕ ಚಟುವಟಿಕೆಗಳನ್ನು ಅವರು ನಡೆಸಿದ್ದರು. ಅವರು ನಡೆಸಿದ ವಿನೂತನ ಪ್ರಯೋಗಗಳ ಪರಿಣಾಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಗಳೂರು ಅದೇ ವರ್ಷ 2ನೇ ಸ್ಥಾನಪಡೆದಿತ್ತು. ಅದಕ್ಕೂ ಮುನ್ನ ಆ ಜಿಲ್ಲೆ 18ನೇ ಸ್ಥಾನದಲ್ಲಿತ್ತು.
ಬೆಂಗಳೂರಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮಾಧಿಕಾರಿ, ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರವಾಚಕರಾಗಿ ಕೆಲಸ ಮಾಡಿದ ಅನುಭವಹೊಂದಿದ ಅವರು ಇದೀಗ ಮತ್ತೆ ಡಿಡಿಪಿಐ ಹುದ್ದೆಗೆ ಬಂದಿದ್ದಾರೆ. ಅವರ ಅನುಭವ ಹಾಗೂ ವಿನೂತನ ಪ್ರಯೋಗಗಳಿಂದ ಶಿರಸಿ ಶೈಕ್ಷಣಿಕ ಜಿಲ್ಲೆ ಸಾಧನೆ ಹೆಚ್ಚಳದ ನಿರೀಕ್ಷೆಯಿದೆ. ಶುಕ್ರವಾರ ಬೆಳಗಾವಿಯಿಂದ ಶಿರಸಿಗೆ ಬಂದ ಅವರು ತಮ್ಮ ಅಧಿಕಾರವಹಿಸಿಕೊಂಡಿದ್ದು, ಶನಿವಾರ ಕಡತಗಳ ವೀಕ್ಷಣೆ ಮಾಡಿದ್ದಾರೆ.
Discussion about this post