ಮೇಷ ರಾಶಿ: ವಾರದ ಆರಂಭದಲ್ಲಿ ಕೆಲವು ಅಡೆತಡೆ ಎದುರಿಸುವಿರಿ. ಕೆಲಸದ ವಿಷಯವಾಗಿ ಓಡಾಟ ಹೆಚ್ಚಾಗಲಿದೆ. ಸಣ್ಣ ತಪ್ಪಿಗೂ ದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿ ಬರಲಿದೆ. ರಾಮನ ಆರಾಧನೆ ಮಾಡುವುದನ್ನು ಮರೆಯಬೇಡಿ.
ವೃಷಭ ರಾಶಿ: ಈ ದಿನ ಬಹಳ ಎಚ್ಚರಿಕೆಯಿಂದ ಇರಿ. ಅವಘಡ-ಅಪಘಾತಗಳ ಬಗ್ಗೆ ಜಾಗೃತವಾಗಿರಿ. ವ್ಯವಹಾರದಲ್ಲಿ ನಿಧಾನಗತಿ ಮುಂದುವರೆಯಲಿದೆ. ಜನರೊಂದಿಗೆ ಉತ್ತಮ ಭಾಂದವ್ಯ ಕಾಪಾಡಿಕೊಳ್ಳಿ.
ಮಿಥುನ ರಾಶಿ: ಅಪೂರ್ಣ ಕೆಲಸಗಳು ಈ ದಿನ ಪೂರ್ಣವಾಗಲಿದೆ. ಕುಟುಂಬದ ಬೆಂಬಲದಿoದ ಯಶಸ್ಸು ಸಾಧ್ಯ.
ಕರ್ಕಾಟಕ ರಾಶಿ: ಇಡೀ ದಿನ ತಾಳ್ಮೆಯಿಂದ ಎದುರಿಸಿ. ವಿರೋಧಿಗಳಿಂದ ಎಚ್ಚರವಾಗಿರಿ. ವೃತ್ತಿಯಲ್ಲಿನ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ.
ಸಿಂಹ ರಾಶಿ: ಏಕಾಏಕಿ ದೊಡ್ಡ ವೆಚ್ಚ ಬರುವ ಸಾಧ್ಯತೆಯಿದೆ. ಮುನ್ನಚ್ಚರಿಕೆಯಿಂದ ವ್ಯವಹರಿಸಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಸಿಗಲಿದೆ.
ಕನ್ಯಾ ರಾಶಿ: ಮನಸ್ಸಿನಲ್ಲಿದ್ದ ಕೆಲಸ ಸಿದ್ಧಿಸಲಿದೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶದ ಸಾಧ್ಯತೆಯಿದೆ. ಪ್ರಯಾಣದ ಸಮಯ ಎಚ್ಚರಕೆಯಿರಲಿ.
ತುಲಾ ರಾಶಿ: ಆದಾಯದ ಮೂಲಗಳು ಸೃಷ್ಠಿಯಾಗುತ್ತವೆ. ಸಂಗಾತಿಯೊಡಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ಸಾಲಬಾಧೆ ಕೊನೆಯಾಗುವ ಸಾಧ್ಯತೆಯಿದೆ.
ವೃಶ್ಚಿಕ ರಾಶಿ: ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ. ಯಾರ ಬಗ್ಗೆಯೂ ಅತಿಯಾದ ನಂಬಿಕೆ ಬೇಡ. ಈ ದಿನ ಏರಿಳಿತಗಳು ಸಾಮಾನ್ಯ.
ಧನು ರಾಶಿ: ಸಣ್ಣ-ಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಗಂಭೀರವಾಗಿ ಯೋಚಿಸಿ, ನಿರ್ಧಾರ ತೆಗೆದುಕೊಳ್ಳಿ. ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
ಮಕರ ರಾಶಿ: ಆರೋಗ್ಯದಲ್ಲಿ ಏರುಪೇರಾಗಬಹುದು. ಯೋಗಕ್ಷೇಮದ ಬಗ್ಗೆ ಕಾಳಜಿಯಿರಲಿ. ಶಿವನ ಆರಾಧನೆ ಮಾಡಿ, ಸಮಸ್ಯೆಯಿಂದ ಹೊರ ಬನ್ನಿ.
ಕುಂಭ ರಾಶಿ: ಕುಟುಂಬದಲ್ಲಿ ಸಂತೋಷ ತುಂಬಿರಲಿದೆ. ದೂರದ ಪ್ರಯಾಣವೂ ಬರಬಹುದು. ವೃತ್ತಿ ಕ್ಷೇತ್ರದಲ್ಲಿ ನಿಮಗೆ ಶುಭ ಸಿಗಲಿದೆ.
ಮೀನ ರಾಶಿ: ಆರೋಗ್ಯದ ಕಡೆ ಜೋಪಾನ. ಹಣಕಾಸಿನ ವಿಚಾರದಲ್ಲಿಯೂ ಜಾಗೃತಿಯಿರಲಿ. ಖರ್ಚು-ವೆಚ್ಚ ಅಧಿಕವಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಣ್ಣ ಪುಟ್ಟ ಕಲಹ ಆಗಲಿದೆ. ಆಂಜಿನೇಯ ದೇವರ ದರ್ಶನ ಮಾಡುವುದು ಒಳಿತು.
Discussion about this post