ಯಲ್ಲಾಪುರದ ಕಿರವತ್ತಿ ಕರ್ನಾಟಕ ಪಬ್ಲಿಕ್ ಸ್ಕೂಲ್’ನಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವುದನ್ನು ಅರಿತ ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಆ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪೂರೈಸಿದ್ದಾರೆ. ಈ ವೇಳೆ ಅವರು ನಟ ಪುನೀತ ರಾಜಕುಮಾರ್ ಅವರ ಸ್ಮರಣೆ ಮಾಡಿದ್ದಾರೆ.
ಆ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಇಲ್ಲದೇ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದರು. ಮಳೆಗಾಲದ ಅವಧಿಯಲ್ಲಿ ಕುಡಿಯುವ ನೀರಿಗೆ ತೊಂದರೆಯಿತ್ತು. ಜುಲೈ ಅವಧಿಯಲ್ಲಿ ಮಕ್ಕಳು ಜ್ವರ-ನೆಗಡಿಯಿಂದ ಬಳಲುತ್ತಿದ್ದರು. ಇದನ್ನು ಅರಿತ ಅನಂತಮೂರ್ತಿ ಹೆಗಡೆ ಶಾಲೆಗೆ ಕೊಡುಗೆ ನೀಡಿದರು. ಈ ಸೇವೆಯನ್ನು ಅಲ್ಲಿನ ಶಿಕ್ಷಕರು ಸ್ಮರಿಸಿದರು.
`ತನ್ನ ಸಮಾಜ ಸೇವೆಗೆ ನಟ ಪುನೀತ್ ರಾಜಕುಮಾರ ಪ್ರೇರಣೆ’ ಎಂದು ಈ ವೇಳೆ ಅನಂತಮೂರ್ತಿ ಹೆಗಡೆ ಅವರು ಹೇಳಿದರು. ಪುನೀತ್ ರಾಜಕುಮಾರ್ ಅವರು ಸಮಾಜಕ್ಕೆ ನೀಡಿದ ಸೇವೆ ಅವರ ಮರಣ ನಂತರವೂ ಹೆಸರನ್ನು ಶಾಶ್ವತವಾಗಿರಿಸಿದೆ. ನಾನು ಮಾಡಿದ ಸೇವೆ ಸಮಾಜಕ್ಕೆ ಉಪಯೋಗವಾದರೆ ಅದೇ ಸಾರ್ಥಕ’ ಎಂದರು.
`ಶಾಲೆ ಸೌಲಭ್ಯ ಸರಿಯಾಗಿ ಬಳಸಿಕೊಂಡು ಸಾಧನೆ ಮಾಡಿ’ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರಮುಖರಾದ ಸೊಮೇಶ್ವರ ನಾಯ್ಕ, ಗಣೇಶ ಹೆಗಡೆ, ಅನಂತ ಮೂರ್ತಿಹೆಗಡೆ, ಪ್ರಸಾದ ಹೆಗಡೆ, ಗಣಪತಿ ಬೋಳಗುಡ್ಡೆ ವೇದಿಕೆಯಲ್ಲಿದ್ದರು.
ಸಾಮಾಜಿಕ ಕಾರ್ಯಕರ್ತ ಸುಭಾಷ ಶೇಷಗಿರಿ ಮಾತನಾಡಿದರು. ಉಪಪ್ರಾಂಶುಪಾಲ ಜನಾರ್ಧನ ಗಾಂವ್ಕರ್ ಸ್ವಾಗತಿಸಿದರು. ಶಿಕ್ಷಕ ಸತೀಶ ಯಲ್ಲಾಪುರ ನಿರೂಪಿಸಿದರು, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ ನಾಯಕ ವಂದಿಸಿದರು.
Discussion about this post