ಮನೆಯಲ್ಲಿ ಮಲಗಿದ್ದ ಅಜ್ಜಿಯ ಒಡವೆ ಅಪಹರಿಸಲು ಯತ್ನಿಸಿದ ವ್ಯಕ್ತಿಯನ್ನು ಭಟ್ಕಳದ ಜನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕುಂದಾಪುರದ ಫೌಜಾನ್ ಅಹ್ಮದ್ (20) ಎಂಬಾತರು ಸಾರ್ವಜನಿಕರಿಗೆ ಸಿಕ್ಕಿಬಿದ್ದ ಆರೋಪಿ. ಭಟ್ಕಳದ ಮೀನಾ ರೋಡಿನಲ್ಲಿರುವ ಆಕೀಪ್ ಅವರ ಮನೆಯಲ್ಲಿ ಫೌಜಾನ್ ಕಳ್ಳತನಕ್ಕೆ ಪ್ರಯತ್ನಿಸಿದ್ದರು.
ಜೂನ್ 27ರ ರಾತ್ರಿ ಆಕೀಪ್ ಅವರ ಮನೆಗೆ ನುಗ್ಗಿದ ಫೌಜಾನ್ ಅಲ್ಲಿ ಮಲಗಿದ್ದ ಅಜ್ಜಿಯ ಕತ್ತು ನೋಡಿದ್ದರು. ನಿಧಾನವಾಗಿ ಅವರ ಬಳಿ ತೆರಳಿ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ್ದರು. ಮನೆಯಿಂದ ಹೊರ ಹೋಗುವ ವೇಳೆ ಆಕೀಪ್ ಅವರು ಕಳ್ಳನನ್ನು ನೋಡಿದರು.
ತಕ್ಷಣ ಆಕೀಪ್ ಬೊಬ್ಬೆ ಹೊಡೆದಿದ್ದು, ಫೌಜಾನ್ ಅಲ್ಲಿಂದ ತಪ್ಪಿಸಿಕೊಂಡರು. ಆಗ, ಮನೆಯವರು ಹಾಗೂ ಸುತ್ತಲಿನ ಸಾರ್ವಜನಿಕರು ಸೇರಿ ಫೌಜಾನ್ ಅವರನ್ನು ಸೆರೆ ಹಿಡಿದರು. ಅದಾದ ನಂತರ ಪೊಲೀಸರನ್ನು ಕರೆಯಿಸಿ ಕಳ್ಳನನ್ನು ಅವರಿಗೆ ಒಪ್ಪಿಸಿದರು.
ಬೆಳಗಾದ ನಂತರ ಆಕೀಪ್ ಅವರು ಪೊಲೀಸ್ ಠಾಣೆಗೆ ಹೋಗಿ ನಡೆದ ವಿದ್ಯಮಾನಗಳ ಬಗ್ಗೆ ಮೇಲಧಿಕಾರಿಗಳಿಗೆ ಹೇಳಿದರು. ಜೊತೆಗೆ ಕಳ್ಳನ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದರು.
Discussion about this post