ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಈ ಹಿಂದೆ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದ ಆರ್ ವಿ ದೇಶಪಾಂಡೆ ಸರ್ಕಾರ ರಚನೆಯಾದ ತರುವಾಯ ಇದೇ ಮೊದಲ ಬಾರಿ ಕಾರವಾರದಲ್ಲಿ ಒಟ್ಟಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಉಸ್ತುವಾರಿ ಸಚಿವ ಸ್ಥಾನ ಸಿಗದ ಕಾರಣ ಆರ್ ವಿ ದೇಶಪಾಂಡೆ ಮುನಿಸಿಕೊಂಡಿದ್ದರು. ಅದಾಗಿಯೂ ವಿವಿಧ ಸರ್ಕಾರಿ ಕಾರ್ಯಕ್ರಮ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಅವರು ಮಂಕಾಳು ವೈದ್ಯ ಅವರ ಜೊತೆ ವೇದಿಕೆ ಏರಿದ್ದರು. ಆದರೆ, ಕಾರವಾರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಸೋಮವಾರ ಈ ಇಬ್ಬರು ಪ್ರಭಾವಿ ರಾಜಕಾರಣಿಗಳು ಅಧಿಕಾರಿಗಳನ್ನು ಮಾತನಾಡಿಸಿ ಜಿಲ್ಲೆಯ ಅಭಿವೃದ್ಧಿ ವಿವರಪಡೆದರು.
`ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಪ್ರವೇಶಾತಿ ನೀಡುವಲ್ಲಿ ಯಾವುದೇ ಕೊರತೆಯಾಗಬಾರದು. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಬoಧಪಟ್ಟ ಅಧಿಕಾರಿಗಳು ಯಾವುದೇ ಸಬೂಬು ಹೇಳದೇ ಹಾಸ್ಟೆಲಿಗೆ ಪ್ರವೇಶ ನೀಡಬೇಕು’ ಎಂದು ಮಂಕಾಳು ವೈದ್ಯ ಸೂಚಿಸಿದರು. `ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಸೇರಿದಂತೆ ಯಾವುದೇ ಇಲಾಖೆಯ ಹಾಸ್ಟೆಲುಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅನುಮತಿ ನೀಡಬೇಕು. ನಿಗಧಿಗಿಂತ ಹೆಚ್ಚಿನ ವಿದ್ಯಾರ್ಥಿಗಳು ನೇಮಕಾತಿ ಬಯಸಿದಲ್ಲಿ ಬಾಡಿಗೆ ಕಟ್ಟಡ ಪಡೆದು ಹಾಸ್ಟೆಲಿಗೆ ಎಲ್ಲಾ ಸೌಲಭ್ಯ ಕಲ್ಪಿಸಬೇಕು’ ಎಂದು ಸೂಚಿಸಿದರು. `ಜಿಲ್ಲೆಯ ಎಲ್ಲಾ ಶಾಲೆ ಮತ್ತು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸುವ ಕಾರ್ಯವನ್ನು ಆದ್ಯತೆಯಲ್ಲಿ ಮಾಡಬೇಕು. ಸರಕಾರಿ ಶಾಲೆಯ ಪ್ರದೇಶ ಅತಿಕ್ರಮಣ ಆಗದಂತೆ ಮತ್ತು ಶಿಥಿಕಲಾವಸ್ಥೆಯಲ್ಲಿರುವ ಶಾಲೆಗಳ ದುರಸ್ತಿ-ಸ್ಥಳಾಂತರದ ಕುರಿತಂತೆ ಹಾಗೂ ಶಾಲಾ ಆವರಣದಲ್ಲಿ ಅಪಾಯಕಾರಿ ಮರಗಳು, ವಿದ್ಯುತ ತಂತಿಗಳು ಹಾಗು ಹೋಗದಂತೆ ನೋಡಿಕೊಳ್ಳುವ ಮೂಲಕ ಮಕ್ಕಳ ಸುರಕ್ಷತೆಗೆ ಗರಿಷ್ಠ ಎಚ್ಚರವಹಿಸಬೇಕು’ ಎಂದರು.
`ಉತ್ತರ ಕನ್ನಡ ಜಿಲ್ಲೆಯ ಯಾವುದೇ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ಆದೇಶ ಪಡೆದರೂ ಅವರ ಜಾಗಕ್ಕೆ ಬೇರೊಬ್ಬ ಅಧಿಕಾರಿ, ಸಿಬ್ಬಂದಿ ನೇಮಕಆಗುವವರೆಗೆ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬಾರದು’ ಎಂದು ಸಚಿವರು ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಸೂಚಿಸಿದರು. `ಜಿಲ್ಲೆಯಲ್ಲಿ ವೈದ್ಯರು ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿ, ಅಧಿಕಾರಿ ಕೊರತೆ ಹೆಚ್ಚಾಗಿದೆ. ಈಗಾಗಲೇ ನಡೆಯುತ್ತಿರುವ ವೈದ್ಯರ ವರ್ಗಾವಣೆ ಪ್ರಕ್ರಿಯೆಯಲ್ಲಿಯೂ ಜಿಲ್ಲೆಗೆ ನಷ್ಠವಾಗುತ್ತಿದೆ’ ಎಂಬುದನ್ನು ಪ್ರಸ್ತಾಪಿಸಿದರು. `ವರ್ಗಾವಣೆಯಿಂದ ಯಾವುದೇ ಹುದ್ದೆ ಖಾಲಿ ಆಗುವಂತೆ ಆಗಬಾರದು. ಆ ಸ್ಥಾನಕ್ಕೆ ಮತ್ತೊಬ್ಬ ಅಧಿಕಾರಿ ನೇಮಕವಾಗುವವರೆಗೆ ವರ್ಗಾವಣೆಯಾಗಿರುವವರನ್ನು ಬಿಡುಗಡೆ ಮಾಡಬಾರದು’ ಎಂದು ಸೂಚಿಸಿದರು.
ಜಿಲ್ಲೆಯು ರಾಜ್ಯಕ್ಕೆ ವಿದ್ಯುತ್ ನೀಡುತ್ತಿದೆ. ಆದರೆ ಜಿಲ್ಲೆಯಲ್ಲಿಯೇ ವಿದ್ಯುತ್ ಕಡಿತವಾಗುತ್ತಿರುವುದ ಬಗ್ಗೆ ಹೆಸ್ಕಾಂ ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತವಾಯಿತು. `ಪ್ರತಿಯೊಂದು ಕುಟುಂಬಕ್ಕೂ ವಿದ್ಯುತ್ ಒದಗಿಸಬೇಕು’ ಎಂದು ಸಚಿವರು ಸೂಚಿಸಿದರು. `ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಕಾರವಾರ, ಗೋಕರ್ಣ, ಮುರ್ಡೇಶ್ವರ ಕಡಲತೀರ ಅಭಿವೃದ್ಧಿ ಮಾಡಬೇಕು. ಕಡಲತೀರಗಳಲ್ಲಿ ಸ್ವಚ್ಛತೆ ಕೂಡ ಮಾಡಬೇಕು’ ಎಂದು ಆರ್ ವಿ ದೇಶಪಾಂಡೆ ಅವರು ಹೇಳಿದರು. `ಪ್ರವಾಸೋದ್ಯಮ ವೆಬ್‌ಸೈಟ್ ಪುನಃ ಆರಂಭಿಸಬೇಕು. ಹೋಂ ಸ್ಟೇಗಳಿಗೆ ಅನುಮತಿ ಕೊಡಲು ಸಮಸ್ಯೆ ಮಾಡಬಾರದು. ಜಿಲ್ಲೆಯ ಹಾಲಕ್ಕಿ ಒಕ್ಕಲ, ಕುಣಬಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಸಂಬAಧ ಕೇಂದ್ರಕ್ಕೆ ರಾಜ್ಯ ಸರಕಾರದಿಂದ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲೆಯ ಗೌಳಿ ಸಮುದಾಯ ಕೂಡ ಎಸ್‌ಟಿ ಪಟ್ಟಿಗೆ ಸೇರುವ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಕೆಡಿಪಿ ಸಭೆಯಿಂದ ನಿರ್ಣಯ ಮಾಡಿ ರಾಜ್ಯಕ್ಕೆ ಪ್ರಸ್ತಾವ ಕಳುಹಿಸಿ’ ಎಂದು ಸೂಚಿಸಿದರು.
`ಅಲಗೇರಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ನೀಡಿದ ಮಾಲೀಕರಿಗೆ ಆದ್ಯತೆ ಮೇಲೆ ಪರಿಹಾರ ಒದಗಿಸಬೇಕು. ಈ ಯೋಜನೆಗೆ ಸ್ಥಳೀಯರು ತಮ್ಮ ನೆಲವನ್ನು ತ್ಯಾಗ ಮಾಡಿದ್ದಾರೆ. ಸೀಬರ್ಡ್ ಆಸ್ಪತ್ರೆಯಲ್ಲಿನ ಸೌಲಭ್ಯಗಳು ಕೇವಲ ಅಲ್ಲಿನ ಸಿಬ್ಬಂದಿಗಳಿಗೆ ಮಾತ್ರ ಮೀಸಲಾಗಿದ್ದು, ಇಲ್ಲಿ ಸ್ಥಳೀಯರಿಗೆ ಚಿಕಿತ್ಸೆ ನೀಡದಿರುವುದು ಖಂಡನೀಯ’ ಎಂದು ಹೇಳಿದರು.
ಶಾಸಕ ಸತೀಶ ಕೆ ಸೈಲ್ ಮಾತನಾಡಿ ಕಾರವಾರ-ಬೆಂಗಳೂರು ಬಸ್ ಸಮಸ್ಯೆ ವಿವರಿಸಿದರು. `ಜಿಲ್ಲಾಸ್ಪತ್ರೆ ಹಳೆ ಕಟ್ಟಡ ಶಿಥಿಲವಾಗಿದೆ. ಹೊಸದಾಗಿ 450 ಹಾಸಿಗೆ ಆಸ್ಪತ್ರೆ ನಿರ್ಮಾಣ ಆಗಿದೆ. ಆದರೆ, ಅದರ ಸಾಮರ್ಥ್ಯ ಪ್ರಮಾಣ ವರದಿ ಸಲ್ಲಿಕೆಯಾಗಿಲ್ಲ’ ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕಿ ಡಾ. ಪೂರ್ಣಿಮಾ ತಿಳಿಸಿದರು. `ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದರೂ ಅಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ಮುಂದುವರಿಸುವುದು ಒಳ್ಳೆಯದಲ್ಲ. ಬೇಗ ಹೊಸ ಕಟ್ಟಡಕ್ಕೆ ರೋಗಿಗಳನ್ನು ಸ್ಥಳಾಂತರಿಸಿ’ ಎಂದು ಜನಪ್ರತಿನಿಧಿಗಳು ಸಲಹೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಕಾರವಾರದಿಂದ ಯಲ್ಲಾಪುರಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತಂದ ಶಾಸಕರು ಕಾರವಾರದಲ್ಲಿರುವ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಸ್ಥಳಾಂತರಿಸದAತೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯನ್ನು ಕಾರವಾರದಿಂದ ಸ್ಥಳಾಂತರಿಸದoತೆ ಅಧಿಕಾರಿಗಳಿಗೆ ಸೂಚಿಸಿದರು. ಕುಮಟಾ- ಶಿರಸಿ ರಸ್ತೆ, ಶಿರಸಿ- ಹಾವೇರಿ ರಸ್ತೆ ಬಗ್ಗೆ ಕಾಮಗಾರಿ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಅವರು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. `ಶಿರಸಿ ಹಾವೇರಿ ರಸ್ತೆ ಸಂಚಾರ ನರಕವಾಗಿದ್ದು, ರಸ್ತೆ ಸರಿಪಡಿಸುವಂತೆ ತಿಳಿಸಿದರರೂ ಇಲ್ಲಿವರೆಗೆ ರಸ್ತೆ ಸರಿಪಡಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೇವಲ ಹಾರಿಕೆ ಉತ್ತರ ನಿಡುತ್ತಿದ್ದಾರೆ’ ಎಂದು ಸಚಿವರ ಗಮನಕ್ಕೆ ತಂದರು.
`ಕುಮಟಾ- ಶಿರಸಿ 54 ಕಿ.ಮೀ. ರಸ್ತೆಯಲ್ಲಿ 44 ಕಿ.ಮೀ. ರಸ್ತೆ ಕಾಮಗಾರಿ ಆಗಿದೆ. 12 ಸೇತುವೆ ಪೈಕಿ 10 ಸೇತುವೆ ಕಾಮಗಾರಿ ಮುಗಿದಿದೆ. ಡಿಸೆಂಬರ್ ವೇಳೆಗೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಶಿರಸಿ- ಹಾವೇರಿ ರಸ್ತೆಯಲ್ಲಿ ಪಾಟ್ ಹೋಲ್ ಗಳನ್ನು ದುರಸ್ತಿ ಮಾಡುವ ಕೆಲಸ ಆಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಂಕೋಲಾ ತಾಲೂಕಿನ ಬೆಳಸೆಯಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆ ಹಾಗೂ ಹೊನ್ನಾವರ ತಾಲೂಕಿನ ಆಳ್ಳಂಕಿಯಲ್ಲಿರುವ ಬಿ.ಆರ್. ಅಂಬೇಡ್ಕರ್ ಶಾಲೆಯನ್ನು ಗುಡ್ಡದ ಮೇಲೆ ಕಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಇಂಜಿನೀಯರ ಅವರಿಂದ ಕಟ್ಟಡದ ಸ್ಥಿರತೆಯ ಬಗ್ಗೆ ಪ್ರಮಾಣಪತ್ರ ಪಡೆಯುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಬ್ಯಾಂಕ್ ಗಳು ನೀಡಲಾಗುತ್ತಿಲ್ಲ ಎಂಬ ದೂರುಗಳು ಬರುತ್ತಿದ್ದು, ಯಾವುದೇ ಕಾರಣಕ್ಕೂ ಶೈಕ್ಷಣಿಕ ಸಾಲದ ಅರ್ಜಿಗಳನ್ನು ನಿರಾಕರಿಸಬಾರದು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ನೀಡದಂತೆ ಹಾಗೂ ಮೀನುಗಾರ ಮಹಿಳೆಯರಿಗೆ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲು ಕ್ರಮಕೈಗೊಂಡಿದ್ದು. ಈ ಬಗ್ಗೆ ಜಿಲ್ಲೆ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ನೀಡುವಂತೆ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಕೇವಲ ಆಹಾರ ಇಲಾಖೆಯಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಈ ಸಂಬAಧ ಟಾಸ್ಕ್ ಫೋರ್ಸ್ ಮಾಡುವಂತೆ ಮನವಿ ಮಾಡಿದರು.
Discussion about this post