ಸಿದ್ದಾಪುರದ ಸುರೇಶ ನಾಯ್ಕ ಹಾಗೂ ಮೋಹನ ನಾಯ್ಕ ನಡುವೆ ದೇವಾಲಯ ಆವರಣದಲ್ಲಿ ಹೊಡೆದಾಟ ನಡೆದಿದೆ. ಅವರಿಬ್ಬರು ಅಪ್ಪ-ಮಗನಾದರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಸಿದ್ದಾಪುರದ ತ್ಯಾರ್ಸಿಯ ಸುರೇಶ ನಾಯ್ಕ ಅವರು ಹೊಟೇಲ್ ವ್ಯಾಪಾರ ಮಾಡಿಕೊಂಡಿದ್ದಾರೆ. ಸಿದ್ದಾಪುರ ಹಲಗೇರಿಯ ಹಸೂರಿನ ಮೋಹನ ನಾಯ್ಕ ಅವರು ಸದ್ಯ ಸಾಗರದಲ್ಲಿ ವಾಸವಾಗಿದ್ದಾರೆ. ಮೋಹನ ನಾಯ್ಕ ಅವರು ಸುರೇಶ ನಾಯ್ಕ ಅವರ ತಂದೆಯಾಗಿದ್ದರೂ ಕೆಲ ವರ್ಷಗಳಿಂದ ಹೆಂಡತಿ-ಮಕ್ಕಳನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದಾರೆ.
ಮೂರು ವರ್ಷದ ಹಿಂದೆ ಸಿದ್ದಾಪುರದಲ್ಲಿ ಸುರೇಶ ನಾಯ್ಕ ಅವರು ಸಾಗರ ಹೊಟೇಲ್ ಶುರು ಮಾಡಿದ್ದರು. ಆಗ, ಅಲ್ಲಿಗೆ ಬಂದ ಮೋಹನ ನಾಯ್ಕ ಅವರು `ಆ ಹೊಟೇಲ್ ತನಗೆವಹಿಸಿಕೊಡು’ ಎಂದಿದ್ದರು. ಇದಕ್ಕೆ ಸುರೇಶ ನಾಯ್ಕ ಒಪ್ಪಿರಲಿಲ್ಲ. ಅದೇ ಕಾರಣಕ್ಕೆ ಅಪ್ಪ-ಮಕ್ಕಳ ನಡುವೆ ವೈಮನಸ್ಸು ಮೂಡಿತ್ತು.
ಜೂನ್ 29ರಂದು ಸುರೇಶ ನಾಯ್ಕ ಅವರು ಹಲಗೇರಿಗೆ ಹೋಗಿದ್ದರು. ಆರಿದ್ರಾ ಮಳೆ ಅಂಗವಾಗಿ ದೇವಾಲಯಕ್ಕೆ ಪೂಜೆ ಮಾಡಿಸಲು ತೆರಳಿದ್ದರು. ಮಾರಿಕಾಂಬಾ ದೇವಸ್ಥಾನದ ಒಳಗೆ ಹೋಗುತ್ತಿರುವಾಗ ಮೋಹನ್ ನಾಯ್ಕ ಅವರು ಮಗನನ್ನು ಅಡ್ಡಗಟ್ಟಿ `ಬೋ.. ಮಗನೆ’ ಎಂದು ಬೈದರು. ಆಗ ಅವರಿಬ್ಬರ ನಡುವೆ ವಾಗ್ವಾದ ನಡೆದು ಸಣ್ಣ ಪ್ರಮಾಣದಲ್ಲಿ ಹೊಡೆದಾಟ ನಡೆಯಿತು. ಈ ಬಗ್ಗೆ ಸುರೇಶ ನಾಯ್ಕ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.
Discussion about this post