ಶಿರಸಿಯ ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿ ಸಂಸ್ಥೆಗೆ ಸರಸ್ವತಿ ಎನ್ ರವಿ ಅವರೇ ಮೂರನೇ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಅಲ್ಲಿನ 12 ನಿರ್ದೇಶಕರು ಸರಸ್ವತಿ ಎನ್ ರವಿ ಅವರನ್ನೇ ಮುಂದುವರೆಸುವ ಬಗ್ಗೆ ನಿರ್ಣಯಿಸಿದರು.
ಸೋಮವಾರ ನಡೆದ ಸಭೆಯಲ್ಲಿ ಶಿರಸಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ್ ಶಿರಹಟ್ಟಿ ಅವರು ಅಧ್ಯಕ್ಷ-ಉಪಾಧ್ಯಕ್ಷರ ಘೋಷಣೆ ಮಾಡಿದರು. ಅದರ ಪ್ರಕಾರ ಮುಂದಿನ 5 ವರ್ಷ ಅವಧಿಗೆ ಸರಸ್ವತಿ ಎನ್ ರವಿ ಅವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಸರಸ್ವತಿ ಎನ್ ರವಿಯವರು ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಪ್ರಮುಖ ಮಹಿಳಾ ಪಟುವಾಗಿದ್ದಾರೆ. ಸಹಕಾರಿ ವ್ಯವಸ್ಥೆಯ ಬಗ್ಗೆ ಅವರು ಆಳವಾಗಿ ಅಧ್ಯಯನ ನಡೆಸಿದ್ದಾರೆ. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಅನುಭವಪಡೆದಿದ್ದಾರೆ. ಈ ಎಲ್ಲಾ ಹಿನ್ನಲೆ ಸರ್ವ ನಿರ್ದೇಶಕರು ಅವಿರೋಧವಾಗಿ ಸರಸ್ವತಿ ಎನ್ ರವಿ ಅವರನ್ನು ಅಧ್ಯಕ್ಷರನ್ನಾಗಿಸಿದರು.
ಸದ್ಯ ಈ ಸೊಸೈಟಿಯ ನಿರ್ದೇಶಕರಾಗಿ ಶೈಲಾ ರವೀಂದ್ರ ಹಿಂಚಿಗೇರಿ ಹಾವೇರಿ, ವೀಣಾ ಕೃಷ್ಣಾ ಮೊಗೇರ ಶಿರಸಿ, ಸ್ವಾತಿ ಶೆಟ್ಟಿ ಶಿರಸಿ, ಸರೋಜಾ ಸತೀಶ್ ಗಂಗೊಳ್ಳಿ ಶಿರಸಿ, ಭಾಗೀರಥಿ ನಾಯ್ಕ ಶಿರಸಿ, ಲಲಿತಾ ಪ್ರಶಾಂತ್ ಹೆಗಡೆ ಸಿದ್ಧಾಪುರ, ಗೀತಾ ಅಶೋಕ್ ಹಣವರ್ ಬೆಳಗಾವಿ, ಮಾಲಿನಿ ಶ್ರೀಧರ್ ನಾಯ್ಕ ಶಿರಸಿ, ಲಕ್ಷಿ ಎಸ್ ಹಾವೇರಿ ಹಾಗೂ ಪೂರ್ಣಿಮಾ ಕರಿಬಸವಯ್ಯ ಪಾಟೀಲ್ ಹಾವೇರಿ ಅವರು ಆಯ್ಕೆಯಾಗಿದ್ದಾರೆ.
Discussion about this post