ಕುಮಟಾದ ನಾಗಪ್ಪ ಗೌಡ ಅವರು ತಾರಿಮಕ್ಕಿಯ ಲಲಿತಾ ಗೌಡ ಅವರನ್ನು ಕೂರಿಸಿಕೊಂಡು ಬೈಕಿನಲ್ಲಿ ಹೋಗುತ್ತಿದ್ದಾಗ ಬೈಕಿನಿಂದ ಬಿದ್ದ ಲಲಿತಾ ಗೌಡ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ತರುವುದರೊಳಗೆ ಸಾವನಪ್ಪಿದ್ದಾರೆ.
ಕುಮಟಾ ಕಡಿಮೆಯ ತಿಪ್ಪಸಗಿಯಲ್ಲಿ ವಾಸವಾಗಿರುವ ನಾಗಪ್ಪ ಗೌಡ ಅವರು ಜೂನ್ 29ರಂದು ಗಂಗಾವಳಿ-ತದಡಿ-ಗೋಕರ್ಣ ರಸ್ತೆ ಮೇಲೆ ಬೈಕಿನಲ್ಲಿ ಹೋಗುತ್ತಿದ್ದರು. ಗೋಕರ್ಣ ತಾರಿಮಕ್ಕಿಯ ಲಲಿತಾ ಗೌಡ ಅವರು ನಾಗಪ್ಪ ಗೌಡ ಅವರ ಜೊತೆ ಆ ಬೈಕಿನಲ್ಲಿದ್ದರು. ಬೈಕಿನ ವೇಗ ಹೆಚ್ಚಿದ್ದ ಕಾರಣ ಬೈಕು ನಿಯಂತ್ರಣ ತಪ್ಪಿತು.
ADVERTISEMENT
ಹನೆಹಳ್ಳಿ ಘಟಗಿ ಬಳಿ ಬೈಕು ರಸ್ತೆ ಬದಿ ಬಿದ್ದಿತು. ಈ ಅಪಘಾತದಲ್ಲಿ ಲಲಿತಾ ಗೌಡ ಅವರು ಪೆಟ್ಟು ಮಾಡಿಕೊಂಡರು. ಗಂಭೀರ ಗಾಯಗೊಂಡ ಲಲಿತಾ ಗೌಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿದ್ದರು. ಬೈಕ್ ಓಡಿಸುತ್ತಿದ್ದ ನಾಗಪ್ಪ ಗೌಡ ಅವರ ವಿರುದ್ಧ ತಲಗೇರಿಯ ಗಣಪತಿ ಗೌಡ ಅವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ADVERTISEMENT
Discussion about this post