ಮೇಷ ರಾಶಿ: ಕೆಲಸದಲ್ಲಿ ಒತ್ತಡ ಸಾಮಾನ್ಯ. ವ್ಯಾಪಾರಿಗಳಿಗೆ ಉತ್ತಮ ಲಾಭದ ನಿರೀಕ್ಷೆ. ಮನೆಯಲ್ಲಿ ಶುಭ ಸುದ್ದಿ ಕೇಳಲಿದೆ. ಆರೋಗ್ಯದಲ್ಲಿ ಸುಧಾರಣೆ ಸಾಧ್ಯ.
ವೃಷಭ ರಾಶಿ: ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ದಿನ. ಸಾಲ ಕೊಟ್ಟು ಸ್ನೇಹ ಕಳೆದುಕೊಳ್ಳಬೇಡಿ. ಆರೋಗ್ಯದಲ್ಲಿ ಚಿಕ್ಕಪುಟ್ಟ ಬದಲಾವಣೆ ಸಹಜ.
ಮಿಥುನ ರಾಶಿ: ಕುತ್ತಿಗೆ ಹಾಗೂ ಬೆನ್ನು ನೋವಿನಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ಆರೋಗ್ಯದ ಕಡೆ ಜೋಪಾನ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ದೇವಸ್ಥಾನಕ್ಕೆ ಭೇಟಿ ನೀಡುವುದು ಉತ್ತಮ.
ಕರ್ಕಾಟಕ ರಾಶಿ: ಈ ದಿನ ಯಾವುದೇ ಹೂಡಿಕೆ ಮಾಡಬೇಡಿ. ಮನೆಯಲ್ಲಿ ಶಾಂತಿಯಿoದ ವರ್ತಿಸಿ. ಧಾರ್ಮಿಕ ಕಾರ್ಯ ಮಾಡುವುದರಿಂದ ಲಾಭ ಸಿಗಲಿದೆ.
ಸಿಂಹ ರಾಶಿ: ಆರೋಗ್ಯದಲ್ಲಿ ಬದಲಾವಣೆಯಾಗಲಿದೆ. ಯಾವುದೇ ಸಮಯದಲ್ಲಾದರೂ ಅನಗತ್ಯ ಹಣವ್ಯಯವಾಗಬಹುದು. ಎಚ್ಚರಿಕೆಯಿಂದ ಇರಿ.
ಕನ್ಯಾ ರಾಶಿ: ವಿಶ್ವಾಸದಿಂದ ಒಳ್ಳೆಯ ಕೆಲಸ ಮಾಡಿ. ಹೊಸ ಉತ್ಸಾಹ ನಿಮ್ಮೊಳಗೆ ಮೂಡಲಿದೆ. ಒಂದು ಕಡೆಯಿಂದ ಹಣ ಲಾಭ. ಇನ್ನೊಂದು ಕಡೆಯಿಂದ ಹಣ ವ್ಯಯವಾಗುವ ಸಾಧ್ಯತೆ ಹೆಚ್ಚಿದೆ.
ತುಲಾ ರಾಶಿ: ದೈಹಿಕ ಹಾಗೂ ಮಾನಸಿಕ ಅಸ್ವಸ್ಥತೆ ಕಾಡಬಹುದು. ಗುರುವಿನ ದರ್ಶನ ಪಡೆಯುವುದು ಪ್ರಯೋಜನಕಾರಿ. ಸಂಗಾತಿಯ ಬೇಡಿಕೆಯನ್ನು ಈಡೇರಿಸಲು ಹೋಗಿ ಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಹುಷಾರಾಗಿರಿ.
ವೃಶ್ಚಿಕ ರಾಶಿ: ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಿ. ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಉತ್ತಮ ಫಲಿತಾಂಶ ಸಿಗಲಿದೆ. ಮಕ್ಕಳಿಂದ ಕೊಂಚ ಬೇಸರವಾಗುವ ಸಂಗತಿ ಇರಲಿದೆ. ಆರೋಗ್ಯದ ಕಡೆ ಗಮನವಿರಲಿ. ದೂರ ಪ್ರಯಾಣ ಮಾಡಬೇಡಿ.
ಧನು ರಾಶಿ: ಅನವಶ್ಯಕ ಕೆಲಸ ಮಾಡಬೇಡಿ. ಅದರಿಂದ ಹಣ ಹಾಳಾಗುವ ಸಾಧ್ಯತೆಯಿದೆ. ಅನವಷ್ಯಕ ಕೆಲಸದಿಂದ ಮಾನಸಿಕ ಸ್ಥಿತಿಯೂ ಹದಗೆಡುತ್ತದೆ. ದುರ್ಗಾದೇವಿ ಪೂಜೆ ಮಾಡುವುದು ಉತ್ತಮ.
ಮಕರ ರಾಶಿ: ಅನಿರೀಕ್ಷಿತ ಹಣ ನಿಮ್ಮ ಕೈ ಸೇರಲಿದೆ. ಉತ್ತಮ ಆರೋಗ್ಯವನ್ನು ಸಹ ಪಡೆಯಲಿದ್ದೀರಿ. ಸಂಗಾತಿಯೊಡನೆ ಭವಿಷ್ಯದ ಚಿಂತನೆಗಳಳನ್ನು ಮಾಡಿ.
ಕುಂಭ ರಾಶಿ: ನೀವು ಬೇರೆಯವರ ಮೇಲೆ ತೋರುವ ದಯೆ ನಿಮಗೆ ಉತ್ತಮ ಫಲ ನೀಡುತ್ತದೆ. ಅದರಿಂದ ಸಂತೋಷವನ್ನು ಅನುಭವಿಸುತ್ತೀರಿ. ಆರ್ಥಿಕ ಸುಧಾರಣೆ ಸಹ ಸಾಧ್ಯ. ಆರೋಗ್ಯವೂ ಸುಧಾರಿಸಲಿದೆ.
ಮೀನ ರಾಶಿ: ಆರೋಗ್ಯ ಸಮಸ್ಯೆ ಬರಲಿದೆ. ಇದರಿಂದ ಅಂದುಕೊoಡ ಕಾರ್ಯ ಮುಂದೂಡಲ್ಪಡುತ್ತದೆ. ಇಷ್ಟು ದಿನ ಹಣ ಖರ್ಚು ಮಾಡುತ್ತಿದ್ದ ನೀವು ಹಣ ಉಳಿಸುವ ಯೋಜನೆ ರೂಪಿಸುವಿರಿ. ಆಂಜನೇಯನ ಆರಾಧನೆ ಮಾಡುವುದು ಪರಿಣಾಮಕಾರಿ ಪ್ರಭಾವ ಬೀರಲಿದೆ.
Discussion about this post