ಆಲೋವೆರಾ, ತೆಂಗಿನ ಎಣ್ಣೆ ಮೊದಲಾದ ವಸ್ತುಗಳನ್ನು ಬಳಸಿ ಕಮಲಾ ಪೂಜಾರಿ ಅವರು ಸಾಬೂನು ಸಿದ್ದಪಡಿಸುತ್ತಾರೆ. ಊರಿನಿಂದ ಊರಿಗೆ ಅಲೆದಾಡಿ ಅವುಗಳನ್ನು ಅವರು ಮಾರಾಟ ಮಾಡುತ್ತಾರೆ. ಮನೆಯಲ್ಲಿಯೇ ತಯಾರಾಗುವ ಈ ಸಾಬೂನು ದರ ದುಬಾರಿ ಅಲ್ಲ. ಗುಣಮಟ್ಟದಲ್ಲಿಯೂ ಅವರು ರಾಜಿ ಮಾಡಿಕೊಂಡಿಲ್ಲ!
ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿಯ ಬೈಚಗೋಡದಲ್ಲಿ ಕಮಲಾ ಪೂಜಾರಿ ಅವರು ವಾಸವಾಗಿದ್ದಾರೆ. ಮೊದಲು ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಕಳೆದ ನಾಲ್ಕು ವರ್ಷಗಳಿಂದ ಗೃಹ ಕೈಗಾರಿಕೆಯತ್ತ ಒಲವು ತೋರಿದ್ದು, ಸದ್ಯ ಮನೆಯಲ್ಲಿಯೇ ಉದಬತ್ತಿ, ಸಾಬೂನು, ಫಿನಾಯಲ್ ಸೇರಿ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಲ್ಲಿ ಕಮಲಾ ಪೂಜಾರಿ ಅವರು ಒಂದು ದಿನದ ಕರಕುಶಲ ತಯಾರಿಕೆ ತರಬೇತಿಪಡೆದಿದ್ದರು. ಅದಾದ ನಂತರ ಒಂದು ಸಾವಿರ ರೂ ಹಣ ನೀಡಿ ಶಿರಸಿಯ ವಿವೇಕಾನಂದ ರಾಯ್ಕರ್ ಅವರ ಬಳಿ ತರಬೇತಿಪಡೆದರು. ಅದಾದ ಮೇಲೆ ಶಿರಸಿಯ ಪೂಜಾ ಅಸೋಶಿಯೇಟ್ಸ್ ಮೂಲಕ ಕಚ್ಚಾ ವಸ್ತುಗಳನ್ನು ತಂದು ಮನೆಯಲ್ಲಿ ಕೆಲಸ ಶುರು ಮಾಡಿದರು.
ಮನೆ ಸುತ್ತಮುತ್ತಲಿನ ಕೆಲವರಿಗೆ ಮೊದಲು ಆ ಉತ್ಪನ್ನಗಳನ್ನು ಮಾರಾಟ ಮಾಡಿದರು. ಅದಾದ ನಂತರ ಮಂಚಿಕೇರಿ-ಉಮ್ಮಚ್ಗಿ ಮೊದಲಾದ ಕಡೆ ತೆರಳಿ ಮಾರಾಟ ಶುರು ಮಾಡಿದರು. ಬಿಡುವಿನ ವೇಳೆ ಉತ್ಪನ್ನ ತಯಾರಿಕೆ ಹಾಗೂ ಉಳಿದ ದಿನಗಳಲ್ಲಿ ಮನೆ ಮನೆ ತಿರುಗಿ ಉತ್ಪನ್ನ ಮಾರಾಟ ಮಾಡುವುದನ್ನು ಅವರು ಕಾಯಕವನ್ನಾಗಿಸಿಕೊಂಡರು.
ಸಿದ್ದಪಡಿಸಿದ ಉತ್ಪನ್ನಗಳನ್ನು ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಿಲ್ಲ. ಅದಾಗಿಯೂ ಗುಣಮಟ್ಟದ ವಸ್ತುಗಳನ್ನು ಖರೀದಿಸಿದ ಜನ ಮನೆಗೆ ಆಗಮಿಸಿ ಸಾಬೂನು-ಉದಬತ್ತಿ ಖರೀದಿಸಿದರು. ದಿನದಿಂದ ದಿನಕ್ಕೆ ಕಮಲಾ ಪೂಜಾರಿ ಅವರು ನಡೆಸುತ್ತಿರುವ ಮಾರುಕಟ್ಟೆ ವಿಸ್ತಾರವಾಗುತ್ತಿದ್ದು, ತಾವು ಸಿದ್ದಪಡಿಸಿದ ಉತ್ಪನ್ನಗಳನ್ನು ಅಂಚೆ ಮೂಲಕವೂ ಅವರು ವಿವಿಧ ಊರುಗಳಿಗೆ ರವಾನಿಸಲು ಸಿದ್ಧವಾಗಿದ್ದಾರೆ. ಕಮಲಾ ಪೂಜಾರಿ ಅವರ ಪತಿ ಶ್ರೀನಿವಾಸ ಪೂಜಾರಿ ಅವರು ಈ ಉದ್ದಿಮೆಯಲ್ಲಿ ಸಹಕಾರ ನೀಡುತ್ತಿದ್ದಾರೆ.
ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಉತ್ಪನ್ನಗಳು ನಿಮಗೂ ಅಗತ್ಯವಿದ್ದರೆ ಇಲ್ಲಿ ಫೋನ್ ಮಾಡಿ: 8431380590
#sponsored
Discussion about this post