ಕುಮಟಾ ದುಬ್ಬಿನಸಸಿ ಗ್ರಾಮದಲ್ಲಿನ ಗಲಾಟೆ ಬಿಡಿಸಲು ಹೋಗಿದ್ದ ಪೊಲೀಸರ ಮೇಲೆ ದುಷ್ಕರ್ಮಿಯೊಬ್ಬ ಕತ್ತಿ ಬೀಸಿದ್ದು, ಈ ಹೊಡೆದಾಟದಲ್ಲಿ ಪೊಲೀಸ್ ಸಿಬ್ಬಂದಿಯ ಸಮವಸ್ತ್ರ ಹರಿದಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ರಕ್ಷಣೆ ಕೋರಿ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾರೆ.
ಕುಮಟಾ ದುಬ್ಬಿನಸಸಿಯ ಶಶಿಹಿತ್ಲಲ್ ಬಳಿ ಪ್ರತೀಕ ನಾಯಕ ಎಂಬಾತರು ರೆಸಾರ್ಟ ನಡೆಸುತ್ತಾರೆ. ಅವರ ಆತಿಥ್ಯ ಬೀಚ್ ಪ್ರಂಟ್ ರೆಸಾರ್ಟಗೆ ನಿತ್ಯ ಮಹಾಬಲೇಶ್ವರ ಗೌಡ ಎಂಬಾತರು ಆಗಮಿಸುತ್ತಾರೆ. `ಇದು ನನ್ನ ಅಜ್ಜನ ಜಾಗ. ನೀವು ಖಾಲಿ ಮಾಡಿ’ ಎಂದು ಗಲಾಟೆ ಮಾಡುತ್ತಾರೆ. ರೆಸಾರ್ಟಿನ ಬಾಗಿಲು ಬಡಿಯವುದು, ಅಲ್ಲಿರುವ ಅತಿಥಿಗಳಿಗೆ ತೊಂದರೆ ನೀಡುವುದು ಮಹಾಬಲೇಶ್ವರ ಗೌಡ ಅವರ ನಿತ್ಯದ ಕೆಲಸ. ರೆಸಾರ್ಟಿನ ಒಳಗಿನ ಗಾಜುಗಳನ್ನು ಒಡೆಯುವುದು ಸಹ ಅವರಿಗೆ ಹೊಸದಲ್ಲ.
ಈ ಎಲ್ಲಾ ಕೃತ್ಯದಿಂದ ಬೇಸತ್ತ ಪ್ರತೀಕ ನಾಯಕ ಅವರು ಜುಲೈ 2ರ ಸಂಜೆ ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರು ಪ್ರತೀಕ ನಾಯಕ ಅವರ ಅಳಲು ಆಲಿಸಿ ವಿಚಾರಣೆ ನಡೆಸಿದ್ದರು. ಅದಾದ ನಂತರ 112 ಪೊಲೀಸ್ ವಾಹನ ಸಿಬ್ಬಂದಿ ನಾರಾಯಣ ಗೌಡ ಅವರು ಮಹಾಬಲೇಶ್ವರ ಗೌಡರನ್ನು ವಿಚಾರಿಸಲು ಅವರ ಮನೆ ಬಳಿ ತೆರಳಿದ್ದರು. ಇದರಿಂದ ಸಿಟ್ಟಾದ ಮಹಾಬಲೇಶ್ವರ ಗೌಡ ಪೊಲೀಸ್ ಸಿಬ್ಬಂದಿ ನಾರಾಯಣ ಗೌಡ ವಿರುದ್ಧ ಕೂಗಾಡಿದರು.
ಮನೆ ಜಗುಲಿ ಮೇಲಿದ್ದ ಕತ್ತಿ ತೆಗೆದು ನಾರಾಯಣ ಗೌಡರ ಕುತ್ತಿಗೆ ಕಡೆ ಬೀಸಿದರು. ಕ್ಷಣಮಾತ್ರದಲ್ಲಿ ತಪ್ಪಿಸಿಕೊಂಡ ಪರಿಣಾಮ ನಾರಾಯಣ ಗೌಡ ಅವರು ಪ್ರಾಣ ಉಳಿಸಿಕೊಂಡರು. ಅದಾಗಿಯೂ ಬಿಡದ ಮಹಾಬಲೇಶ್ವರ ಗೌಡರು ನಾರಾಯಣ ಗೌಡರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದರು. ಅವರು ಧರಿಸಿದ್ದ ಪೊಲೀಸ್ ಯುನಿಪಾರಂ’ನ್ನು ಹರಿದರು.
`ಅದು ನನ್ನ ಅಜ್ಜನ ಆಸ್ತಿ. ಅಲ್ಲಿ ಪೊಲೀಸರಿಗೂ ಪ್ರವೇಶವಿಲ್ಲ’ ಎಂದು ಮಹಾಬಲೇಶ್ವರ ಗೌಡ ದೊಡ್ಡದಾಗಿ ಕೂಗಾಡದರು. `ಆ ಆಸ್ತಿ ಬಿಟ್ಟು ಹೋಗಿ’ ಎಂದು ಬೊಬ್ಬೆ ಹೊಡೆದರು. `ನೀವು ಪೊಲೀಸರಾದರೇನು? ನನಗೆ ಸಂಬoಧವಿಲ್ಲ’ ಎನ್ನುತ್ತ ಇನ್ನಷ್ಟು ನಾರಾಯಣ ಗೌಡರ ಮೇಲೆ ಇನ್ನಷ್ಟು ದಾಳಿ ಮಾಡಿದರು. ಕಾಲಿನಿಂದ ಒದ್ದು ನೋವುಂಟು ಮಾಡಿದರು.
ಈ ಎಲ್ಲಾ ವಿದ್ಯಮಾನದ ಬಗ್ಗೆ ಪೊಲೀಸ್ ಸಿಬ್ಬಂದಿ ನಾರಾಯಣ ಗೌಡ ಅವರು ಗೋಕರ್ಣ ಠಾಣೆಗೆ ಬಂದು ವರದಿ ಒಪ್ಪಿಸಿದರು. ಪಿಎಸ್‌ಐ ಖಾದರ್ ಭಾಷಾ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Discussion about this post