ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ಧಾರಾಕಾರ ಮಳೆಯಗುತ್ತಿದೆ. ಪರಿಣಾಮ ಕಾರವಾರ ಹಾಗೂ ಶಿರಸಿಯಲ್ಲಿ ಗುರುವಾರ ಭೂ ಕುಸಿತವಾಗಿದೆ.
ಕಾರವಾರದಿಂದ ಕದ್ರಾ ಕೊಡಳಸ್ಳಿ ಅಣೆಕಟ್ಟಿಗೆ ಸಂಪರ್ಕ ಕಲ್ಪಿಸುವ ಬಾಳೆಮನೆ ಬಳಿ ರಸ್ತೆ ಮೇಲೆ ಮಣ್ಣು ಬಿದ್ದಿದೆ. ಮಣ್ಣಿನ ಜೊತೆ 150ಕ್ಕೂ ಅಧಿಕ ಗಿಡ-ಮರಗಳು ನೆಲಕ್ಕೆ ಅಪ್ಪಳಿಸಿದೆ. ಸುಮಾರು 50ಮೀಟರ್ ಅಗಲದವರೆಗೆ ಇಲ್ಲಿ ಭೂ ಕುಸಿತವಾಗಿದೆ. ಜಿಲ್ಲಾ ಪಂಚಾಯತ ಅಧೀನದ ರಸ್ತೆಯಾಗಿದ್ದರೂ ಈ ಮಾರ್ಗದಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ.
ಕದ್ರಾ ಅಣೆಕಟ್ಟಿನಿಂದ 12 ಕಿಮೀ ದೂರದಲ್ಲಿ ಈ ಭೂ ಕುಸಿತ ಉಂಟಾಗಿದೆ. ಪರಿಣಾಮ ಅಣೆಕಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರವೂ ಸ್ಥಗಿತಗೊಂಡಿದೆ. ಭೂ ವಿಜ್ಞಾನಿಗಳು ಗುಡ್ಡ ಕುಸಿತ ಪರಿಶೀಲನೆಗೆ ತೆರಳಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಆ ರಸ್ತೆ ಮಾರ್ಗದ ಸಂಚಾರವನ್ನು ನಿಷೇಧಿಸಿದೆ. ಜಲಾನಯನ ಪ್ರದೇಶದ ಸಾಮಿಪ್ಯದಲ್ಲಿ ಕುಸಿತವಾಗಿದ್ದರಿಂದ ಜನ ಆತಂಕಗೊAಡಿದ್ದಾರೆ. ಭೂ ಕುಸಿತದಿಂದ ಅಣೆಕಟ್ಟಿಗೆ ಯಾವುದೇ ಅಪಾಯವಿಲ್ಲ ಎಂದು ಕೆಪಿಸಿ ಅಧಿಕಾರಿಗಳು ಹೇಳಿದ್ದಾರೆ.
ಬಾಳೆಮನೆ ಗ್ರಾಮ ಹಾಗೂ ಜೊಯಿಡಾದ ಸೂಳಗೇರಿ ಗ್ರಾಮದ ಜನ ಮಾತ್ರ ಈ ರಸ್ತೆಯಲ್ಲಿ ಹೆಚ್ಚಿಗೆ ಸಂಚರಿಸುತ್ತಿದ್ದರು. ಅವರಿಗೆ ಇದೀಗ ಸಂಚಾರಕ್ಕೆ ಪರ್ಯಾಯ ರಸ್ತೆ ಇಲ್ಲ. ಕೊಡಸಳ್ಳಿ ಅಣೆಕಟ್ಟಿನ ನಿರ್ವಹಣೆಗೆ ಅಧಿಕಾರಿಗಳು ಸಹ ಇದೇ ರಸ್ತೆ ಉಪಯೋಗಿಸುತ್ತಿದ್ದು, ಸದ್ಯ ಅವರ ಸಂಚಾರವೂ ಸ್ಥಗಿತವಾಗಿದೆ.
ಶಿರಸಿಯಲ್ಲಿಯೂ ಧರೆ ಕುಸಿತ
ಶಿರಸಿಯ ಗಣೇಶ ನಗರದಲ್ಲಿ ಸಹ ಧರೆ ಕುಸಿತವಾಗಿದೆ. ಗಣೇಶ ನಗರದ ನೀರಿನ ಟ್ಯಾಂಕ್ ಬಳಿ ಇರುವ ತಿರುಕಪ್ಪನ ಮನೆ ಹಿಂದಿನ ಮಣ್ಣು ಕುಸಿದಿದೆ. ಆ ಮಣ್ಣು ಅಲ್ಲಿರುವ ಮನೆ ಬಾಗಿಲಿನವರೆಗೂ ಬಂದು ಬಿದ್ದಿದೆ.
ಧರೆ ಮಣ್ಣು ಕುಸಿತದಿಂದ ಧರೆ ಕೆಳಗಿದ್ದವರು ಅಪಾಯಕ್ಕೆ ಸಿಲುಕಿದ್ದಾರೆ. ಧರೆ ಮೇಲ್ಬಾಗದವರು ಸಹ ಆತಂಕದಲ್ಲಿದ್ದಾರೆ. ಬುಧವಾರ ಶಾಸಕ ಭೀಮಣ್ಣ ನಾಯ್ಕ ಅವರು ಈ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗಲು ಕೆಲವರು ಧರೆ ಕುಸಿತದ ಆತಂಕವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ಧರೆ ಕುಸಿದಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಗಣೇಶನಗರದಲ್ಲಿನ ಧರೆ ಕುಸಿತದಿಂದ ಒಟ್ಟು 5 ಮನೆಗಳಿಗೆ ಇಲ್ಲಿ ಅಪಾಯವಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಸ್ಥಳಕೆಕ ಬಂದು ಪರಿಹಾರ ಒದಗಿಸಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.
ಶಿರಸಿಯ ಬದನಗೋಡ ಪಂಚಾಯತ ವ್ಯಾಪ್ತಿಯ ರಂಗಾಪುರದಲ್ಲಿಯೂ ಮಳೆ ರಭಸಕ್ಕೆ ಕೊಟ್ಟಿಗೆಯೊಂದು ಕುಸಿದು ಬಿದ್ದಿದೆ. ಗುರುವಾರ ನಸುಕಿನಲ್ಲಿ ಕೊಟ್ಟಿಗೆ ನೆಲಸಮವಾಗಿದೆ. 10ಕ್ಕೂ ಅಧಿಕ ಜಾನುವಾರುಗಳು ಕೊಟ್ಟಿಗೆಯಲ್ಲಿದ್ದು, ಅವೆಲ್ಲವೂ ಗಾಯಗೊಂಡಿವೆ. ಲಕ್ಷಣ ಗುಂಡಿಹAದ್ರಾಳ ಅವರಿಗೆ ಸೇರಿದ ಕೊಟ್ಟಿಗೆ ಇದಾಗಿತ್ತು. ಜಾನುವಾರುಗಳು ಜೀವಾಪಾಯದಿಂದ ಪಾರಾಗಿದ್ದರೂ, ನೋವು ಅನುಭವಿಸುತ್ತಿವೆ. ಕೊಟ್ಟಿಗೆ ಕುಸಿತದಿಂದ ಮಾಲಕರಿಗೆ 74 ಸಾವಿರ ರೂ ಹಾನಿಯಾಗಿದೆ.
Discussion about this post