ನಿತ್ಯ ಸಾವಿರಾರು ಜನ ಭೇಟಿ ನೀಡುವ ಗೋಕರ್ಣ ಗಬ್ಬೆದ್ದಿದ್ದು, ಶುಚಿತ್ವ ಕಾಪಾಡಲು ಅಲ್ಲಿನ ಗ್ರಾಮ ಪಂಚಾಯತವೂ ವಿಫಲವಾಗಿದೆ. ಅನೇಕ ಗಣ್ಯರು ಭೇಟಿ ನೀಡುವ ಗೋಕರ್ಣದ ಅಂದ ಹೆಚ್ಚಿಸಲು ಸ್ಥಳೀಯ ಆಡಳಿತ ಆಸಕ್ತಿವಹಿಸುತ್ತಿಲ್ಲ.
ಗೋಕರ್ಣದ ಕೋಟಿತೀರ್ಥ ಸಂಪೂರ್ಣವಾಗಿ ಗಲೀಜಾಗಿದೆ. ಕೋಟಿತೀರ್ಥದ ಮಾಲಿನ್ಯ ತಡೆಗೆ ಗ್ರಾ ಪಂ ತಲೆಕೆಡಿಸಿಕೊಂಡಿಲ್ಲ. ನಿತ್ಯ ನೂರಾರು ಜನ ಅಲ್ಲಿ ಪಿತೃಕಾರ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿಲ್ಲ. ಈ ಬಗ್ಗೆ ಕರವೇ ಜನಧ್ವನಿಯ ಉಮಾಕಾಂತ ಹೊಸಕಟ್ಟಾ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ. ಗ್ರಾ ಪಂ ಆಡಳಿತ ಸುಧಾರಣೆ ಆಗದಿದ್ದರೆ ಪ್ರತಿಭಟಿಸುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
`ಗೋಕರ್ಣದ ಕೋಟಿತೀರ್ಥದಲ್ಲಿ ಸ್ನಾನ ಮಾಡಿದರೆ ಮನಸ್ಸು ಶಾಂತಿಯಾಗುತ್ತದೆ. ಕೆಟ್ಟ ಗ್ರಹಚಾರಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಅನೇಕರು ವರ್ಷಕ್ಕೆ ಒಮ್ಮೆಯಾದರೂ ಅಲ್ಲಿ ಸ್ನಾನ ಮಾಡುತ್ತಾರೆ. ಎರಡು ವರ್ಷದ ಹಿಂದೆ ಕೋಟಿತೀರ್ಥದ ಸ್ವಚ್ಚತೆಗೆ ಒತ್ತು ನೀಡಲಾಗಿದ್ದು, ಇದೀಗ ಅಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಕಾರ್ಯ ಮುಗಿದ ತಕ್ಷಣ ಬಟ್ಟೆ-ಬರೆಗಳನ್ನು ಅಲ್ಲಿಯೇ ಬಿಟ್ಟು ತೆರಳುತ್ತಿದ್ದು, ಅದನ್ನು ಶುಚಿಗೊಳಿಸುವ ಕೆಲಸ ನಡೆದಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದರು.
`ಅನೇಕ ತಿಂಗಳಿನಿAದ ಕೋಟಿತೀರ್ಥದಲ್ಲಿ ಬಟ್ಟೆಗಳು ಕೊಳೆಯುತ್ತಿದೆ. ರಾಶಿಬಿದ್ದ ಕಸಗಳಿಂದ ಸೌಂದರ್ಯ ಹಾಳಾಗಿದೆ. ಇದರಿಂದ ಸಾರ್ವಜನಿಕರಿಗೂ ಸಮಸ್ಯೆಯಾಗುತ್ತದೆ’ ಎಂದವರು ವಿವರಿಸಿದರು. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಕರವೇ ಜನಧ್ವನಿಯಿಂದ ಹೋರಾಟ ನಿಶ್ಚಿತ ಎಂದು ಉಮಾಕಾಂತ ಹೊಸಕಟ್ಟಾ ಅವರು ಎಚ್ಚರಿಸಿದರು.
Discussion about this post