ಮುಂಡಗೋಡು, ಹಳಿಯಾಳ, ಕಾರವಾರ ಪೊಲೀಸರು ಮದ್ಯ ಹಾಗೂ ಮಾದಕ ವ್ಯಸನಗಳ ವಿರುದ್ಧದ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ಎಲ್ಲಾ ತಾಲೂಕುಗಳಲ್ಲಿಯೂ ಅಕ್ರಮ ಎಸಗಿದವರ ಮೇಲೆ ದಾಳಿ ನಡೆದಿದ್ದು, ಆರೋಪಿತರ ವಿರುದ್ಧ ಕಾನೂನು ಕ್ರಮವಾಗಿದೆ.
ಮುಂಡಗೋಡಿನ ಓಣಿಕೇರಿಯಲ್ಲಿ ಕಿರಾಣಿ ಅಂಗಡಿ ನಡೆಸುವ ಸುಂಕಪ್ಪ ಕೋರವರ್ ಅವರು ಮದ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಪಿಐ ರಮೇಶ ಹಾನಾಪುರ ಅವರು ಅಂಗಡಿ ಮೇಲೆ ದಾಳಿ ನಡೆಸಿ ಮದ್ಯವನ್ನು ವಶಕ್ಕೆಪಡೆದಿದ್ದಾರೆ. ಜೊತೆಗೆ ಮದ್ಯ ಮಾರಾಟದಿಂದಗಳಿಸಿದ್ದ ಹಣವನ್ನು ಜಪ್ತು ಮಾಡಿದ್ದಾರೆ.
ಹಳಿಯಾಳದ ಕಾವಲವಾಡ ದೊಡ್ಡಕೆರೆ ಬಳಿ ಗಲಾಟೆ ಮಾಡುತ್ತಿದ್ದ ಶಿಗಳ್ಳಿಯ ಆರೀಪ್ ಶರೀಪಸಾಬ್ ಅವರನ್ನು ಪಿಎಸ್‌ಐ ಕೃಷ್ಣಗೌಡ ಅರಿಕೇರಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೀಪ್ ಶರೀಪಸಾಬ್ ಸೆಂಟ್ರಿ0ಗ್ ಕೆಲಸ ಮಾಡುವವರಾಗಿದ್ದು, ಹುಚ್ಚನ ರೀತಿ ಒಬ್ಬರೇ ನಗುತ್ತಿದ್ದರು. ಹೀಗಾಗಿ ಪೊಲೀಸರು ಅವರನ್ನು ವೈದ್ಯರ ಬಳಿ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದಾಗ ಆರೀಪ್ ಗಾಂಜಾ ಸೇವಿಸಿರುವುದು ದೃಢವಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಳಿಯಾಳ ಕಾಜಲವಾಡದಲ್ಲಿ ಮೊಡಕಾ ವ್ಯಾಪಾರ ಮಾಡುವ ಸಮೀರ್ ಬಾಬಾಜಾನ್ ಸಹ ಗಾಂಜಾ ಸೇವಿಸಿ ಪಿಎಸ್‌ಐ ಬಸವರಾಜ ಮಬನೂರು ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ. ಸಕ್ಕರೆ ಕಾರ್ಖಾನೆ ಬಳಿ ಗಲಾಟೆ ಮಾಡುತ್ತಿದ್ದ ಸಮೀರ್ ಅವರನ್ನು ವಿಚಾರಿಸಿದಾಗ ಮಾದಕ ವ್ಯಸನ ಸೇವನೆ ಅರಿವಿಗೆ ಬಂದಿದೆ. ಹೀಗಾಗಿ ಅವರ ವಿರುದ್ಧವೂ ಪೊಲೀಸ್ ಪ್ರಕರಣ ದಾಖಲಾಗಿದೆ.
ಹಳಿಯಾಳ ಮುರ್ಕವಾಡದ ಪುಂಡಳಿಕ ಕೋಳಂಬಿ ಅವರು ತಮ್ಮ ಗೂಡಂಗಡಿಯ ಕಟ್ಟೆ ಮೇಲೆ ಸರಾಯಿ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಪಿಎಸ್‌ಐ ಬಸವರಾಜ ಮಬನೂರು ಅವರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಕದ್ರಾ ರಾಜೀವನಗರದಲ್ಲಿ ಆರ್ಮುಗಂ ಸುಬ್ರಾಯಂ ಬಸ್ ನಿಲ್ದಾಣದಲ್ಲಿ ಮದ್ಯ ಸೇವಿಸುವಾಗ ಪೊಲೀಸರು ದಾಳಿ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಿದ ಕಾರಣ ಪಿಐ ಪ್ರಕಾಶ ದೇವಾಡಿಗ ಪ್ರಕರಣ ದಾಖಲಿಸಿದ್ದಾರೆ.
Discussion about this post