ಮಾಜಿ ಸೈನಿಕ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಕಾಶಿನಾಥ ನಾಯ್ಕ ಅವರು ತಮ್ಮ ದೊಡ್ಡಪ್ಪನ ಹೆಸರಿನಲ್ಲಿ ಸಾವಿರ ಗಿಡ ನೆಡುವ ಸಂಕಲ್ಪ ಮಾಡಿದ್ದಾರೆ. ರೈತರಿಗೆ ಉಪಯೋಗವಾಗಬಲ್ಲ ಗಿಡಗಳನ್ನು ಅವರು ಅರಣ್ಯ ಪ್ರದೇಶದಲ್ಲಿ ನಾಟಿ ಮಾಡುವ ಚಿಂತನೆ ನಡೆಸಿದ್ದಾರೆ.
ಕಾಶಿನಾಥ ನಾಯ್ಕ ಅವರ ದೊಡ್ಡಪ್ಪ ಜಟ್ಟಪ್ಪ ನಾಯ್ಕ ಅವರು ಶಿರಸಿ ತಾಲೂಕಿನ ಬೆಂಗ್ಲೆಯಲ್ಲಿ ವಾಸವಾಗಿದ್ದರು. ಅವರು ಉತ್ತಮ ಕೃಷಿಕರಾಗಿದ್ದರು. ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡಿದ್ದ ಜಟ್ಟಪ್ಪ ನಾಯ್ಕ ಅವರು ಅರಣ್ಯದ ಬಗ್ಗೆ ಕಾಳಜಿಹೊಂದಿದ್ದರು. ಮೇ 18ರಂದು ಅವರು ದಿಢೀರ್ ಹೃದಯಘಾತದಿಂದ ಸಾವನಪ್ಪಿದ್ದು, ಕಾಶಿನಾಥ ನಾಯ್ಕ ಅವರ ಸಂಕಲ್ಪದಿoದ ಜಟ್ಟಪ್ಪ ನಾಯ್ಕ ಅವರ ಹೆಸರಿನಲ್ಲಿ ಸಾವಿರ ಗಿಡಗಳು ಪರಿಸರದಲ್ಲಿ ಬೆಳೆಯಲಿವೆ.
ಸದ್ಯ ದಶಲಕ್ಷ ಗಿಡ ನೆಡುವ ಅಭಿಯಾನ ನಡೆಸುತ್ತಿರುವ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರಿಗೆ ಕಾಶಿನಾಥ ನಾಯ್ಕ ಅವರು ಗಿಡಗಳನ್ನು ಹಸ್ತಾಂತರಿಸಿದ್ದಾರೆ. ಮುರುಗಲ, ವಾಟೆ ಸೇರಿ ಅನೇಕ ಔಷಧೀಯ ಗಿಡಗಳನ್ನು ಅವರು ನೀಡಿದ್ದಾರೆ. ಜುಲೈ 15ರವರೆಗೆ ಗಿಡ ನೆಡುವ ಆಂದೋಲನ ವಿಸ್ತರಿಸಲಾಗಿದ್ದು, ಕಾಶಿನಾಥ ನಾಯ್ಕ ಅವರು ನೀಡಿದ ಗಿಡಗಳನ್ನು ಪರಿಸರ ಕಾರ್ಯಕರ್ತರು ಆರೈಕೆ ಮಾಡಲಿದ್ದಾರೆ.
Discussion about this post