ಮೇಷ ರಾಶಿ: ಈ ದಿನ ನಿಮ್ಮ ಉತ್ಸಾಹ ಹೆಚ್ಚಾಗಲಿದೆ. ಆರ್ಥಿಕ ವಿಚಾರದಲ್ಲಿ ಚಿಂತೆಯಾಗಬಹುದು. ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿ. ಆರೋಗ್ಯದ ವಿಷಯದಲ್ಲಿ ಜಾಗೃತರಾಗಿರಿ.
ವೃಷಭ ರಾಶಿ: ನಿಮ್ಮ ನಿರ್ಧಾರಗಳು ಅತ್ಯಂತ ಪರಿಣಾಮಕಾರಿಯಾಗಿರಲಿವೆ. ಹಣಕಾಸು ವಿಷಯದಲ್ಲಿ ಲಾಭವಾಗಲಿದೆ.
ಮಿಥುನ ರಾಶಿ: ಈ ದಿನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ನಿರಾಸೆಯಾಗಬೇಡಿ. ಕೌಟುಂಬಿಕ ಚರ್ಚೆಗಳಲ್ಲಿ ತಾಳ್ಮೆಯಿಂದ ವರ್ತಿಸಿ. ಹೊಸ ಖರೀದಿಗೆ ಈ ದಿನ ನಿಮಗೆ ಸೂಕ್ತವಲ್ಲ.
ಕರ್ಕಾಟಕ ರಾಶಿ: ಈ ದಿನ ಕೆಲಸದಲ್ಲಿ ಯಶಸ್ಸು ಸಾಧ್ಯ. ಹಳೆಯ ಕೆಲಸಗಳು ಈ ದಿನ ಪೂರ್ತಿಯಾಗಲಿದೆ. ಮಿತ್ರರ ಸಹಕಾರ ಸಿಗಲಿದೆ.
ಸಿಂಹ ರಾಶಿ: ಈ ದಿನ ಆತ್ಮವಿಶ್ವಾಸದ ಜೊತೆ ಧೈರ್ಯವೂ ಹೆಚ್ಚಾಗಲಿದೆ. ಹಠ, ಅಹಂಕಾರದಿoದ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರಬಹುದು. ಆ ಬಗ್ಗೆ ಎಚ್ಚರಿಕೆವಹಿಸಿ. ಹಣಕಾಸು ವ್ಯವಹಾರ ಸ್ಥಿರವಾಗಿರಲಿದೆ.
ಕನ್ಯಾ ರಾಶಿ: ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಿ. ಮಾಡುವ ಕೆಲಸದಲ್ಲಿ ಚುರುಕು ಹಾಗೂ ಬುದ್ಧಿವಂತಿಕೆ ಬಳಸಿ. ಹಣಕಾಸಿನ ವಿಷಯದಲ್ಲಿ ನಿರೀಕ್ಷಿತ ಲಾಭ ಸಿಗಲಿದೆ.
ತುಲಾ ರಾಶಿ: ಕಲಾವಿಧರಿಗೆ ಯಶಸ್ಸು ಸಿಗುವ ದಿನ. ಕಾನೂನು ವಿಚಾರದಲ್ಲಿ ತಾಳ್ಮೆವಹಿಸಿ. ಹಣದ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ
ವೃಶ್ಚಿಕ ರಾಶಿ: ನೀವು ತೆಗೆದುಕೊಳ್ಳುವ ನಿರ್ಧಾರ ಬೇರೆಯವರ ಮೇಲೆ ಪರಿಣಾಮ ಬೀರಬಹುದು. ಮಾತು ಜವಾಬ್ದಾರಿಯಿಂದ ಇರಲಿ. ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ ಬರಲಿದೆ.
ಧನು ರಾಶಿ: ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಅಸಹಜ ಘಟನೆಗಳಿಂದ ಆತಂಕ ಆಗಬಹುದು. ಹಣಕಾಸು ವಿಷಯದಲ್ಲಿ ಬುದ್ಧಿವಂತಿಕೆ ಅಗತ್ಯ.
ಮಕರ ರಾಶಿ: ದಿನದ ಆರಂಭದಲ್ಲಿ ಒತ್ತಡ ಹೆಚ್ಚಳವಾಗಲಿದೆ. ಬೆಳಗ್ಗೆ ಸಮಯದಲ್ಲಿ ಮಾನಸಿಕ ಸ್ಥಿರತೆಯೂ ಕುಸಿಯಬಹುದು. ಸಂತೋಷದ ಕ್ಷಣ ನಿರೀಕ್ಷಿಸಿ. ಸಂಜೆ ಮನಸ್ಸಿಗೆ ನಿರಾಳವಾಗಲಿದೆ.
ಕುಂಭ ರಾಶಿ: ಸಮಸ್ಯೆಗಳನ್ನು ಅತ್ಯಂತ ಜಾಣ್ಮೆಯಿಂದ ಬಗೆಹರಿಸುವಿರಿ. ಬುದ್ಧಿವಂತಿಕೆ ಬಗ್ಗೆ ಮೆಚ್ಚುಗೆ ಸಿಗಲಿದೆ. ಮಾತಿನಲ್ಲಿ ಹಿಡಿತವಿರಲಿ. ಹಣಕಾಸಿನ ವಿಷಯದಲ್ಲಿ ಏರುಪೇರಾಗುವ ಲಕ್ಷಣವಿದೆ.
ಮೀನ ರಾಶಿ: ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳಿ. ಇಡೀ ದಿನ ಶುಭವಾಗಿದೆ. ಮಕ್ಕಳಿಂದಲೂ ಶುಭ ಸುದ್ದಿ ಬರಲಿದೆ.
Discussion about this post