`ಶಿಕ್ಷಕರು ಮೈಗೂಡಿಸಿಕೊಂಡ ಹವ್ಯಾಸಗಳನ್ನು ವಿದ್ಯಾರ್ಥಿಗಳು ಅನುಸರಿಸುವ ಸಾಧ್ಯತೆ ಹೆಚ್ಚಿದ್ದು, ಪ್ರತಿಯೊಬ್ಬ ಶಿಕ್ಷಕರು ಆದರ್ಶ ಜೀವನ ನಡೆಸಬೇಕು’ ಎಂದು ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಕಿವಿಮಾತು ಹೇಳಿದ್ದಾರೆ.
`ಪ್ರತಿಯೊಬ್ಬರು ತಮಗೆವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಶಿಕ್ಷಣ ಇಲಾಖೆಯ ಯೋಜನೆಯನ್ನು ಪ್ರತಿ ವಿದ್ಯಾರ್ಥಿಗಳಿಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಮಿತಭಾಷಿಯಾಗಿದ್ದ ಮಲವಳ್ಳಿಯ ಶಿಕ್ಷಕ ಸಂತೋಷ ಶೆಟ್ಟಿ ಅವರು ಮುಂಚೂಣಿಯಲ್ಲಿದ್ದರು. ವಿಜ್ಞಾನ ಬಳಗದವತಿಯಿಂದ ಶಿಕ್ಷಕರ ರಾಜಶೇಖರ ಅವರ ಜೊತೆಗೂಡಿ ಅವರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ’ ಎಂದು ಅವರ ಸೇವೆಯನ್ನು ಸ್ಮರಿಸಿದರು.
ವಿಜ್ಞಾನ ಶಿಕ್ಷಕರಾದ ಸಂತೋಷ ಶೆಟ್ಟಿ ಅವರ ನಿವೃತ್ತಿ ಹಾಗೂ ವೀರೇಂದ್ರ ಗೌಡ ಅವರ ವರ್ಗಾವಣೆ ಹಿನ್ನಲೆ ಯಲ್ಲಾಪುರದ ಹೋಲಿ ರೋಸರಿ ಶಾಲೆಯಲ್ಲಿ ಶಿಕ್ಷಣಾಧಿಕಾರಿ ಕಚೇರಿ ಹಾಗೂ ವಿಜ್ಞಾನ ಬಳಗದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಅವರು ಭಾಗವಹಿಸಿದ್ದರು. ಮಲವಳ್ಳಿಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ವೀರೇಂದ್ರ ಗೌಡ ಅವರ ಕಾರ್ಯದ ಬಗ್ಗೆಯೂ ಶಿಕ್ಷಣಾಧಿಕಾರಿಗಳು ಮೆಚ್ಚುಗೆವ್ಯಕ್ತಪಡಿಸಿದರು.
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸಂತೋಷ ಜಿಗಳೂರು, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಜಯ್ ನಾಯಕ್, ತಾಲೂಕ ಸಹ ಶಿಕ್ಷಕರ ಅಧ್ಯಕ್ಷ ಚಂದ್ರಶೇಖರ್ ಎಸ್ ಎಸ್ ಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಪ್ರಶಾಂತ್ ಜಿಎನ್, ಹೋಲಿ ರೋಜರಿ ಪ್ರೌಢಶಾಲೆ ಮುಖ್ಯಾಧ್ಯಪಕ ಫಾದರ್ ರೆಮಂಡ್ ಫರ್ನಾಂಡಿಸ್ ಇದ್ದರು. ಉಮ್ಮಚ್ಗಿ ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಪಕ ನಾರಾಯಣ ನಾವುಡ ಅಧ್ಯಕ್ಷತೆವಹಿಸಿದ್ದರು.
ವಿಜ್ಞಾನ ಬಳಗದ ಶಿಕ್ಷಕ ಸದಾನಂದ ದಬಗಾರ ಸ್ವಾಗತಿಸಿದರು. ನಿತೀಶ್ ಹಾಗೂ ರೂಪಾ ಲಾಡ್ ಅಭಿನಂದನಾ ಪತ್ರ ಓದಿದರು. ಶಿಕ್ಷಕ ಎಂ ರಾಜಶೇಖರ್ ಪ್ರಸ್ತಾಪಿಸಿದರು. ಶಿಕ್ಷಕ ದಿನೇಶ್ ಆಚಾರಿ ವಂದಿಸಿದರು. ಶಿಕ್ಷಕ ಗಜಾನನ ಭಟ್ ನಿರ್ವಹಿಸಿದರು. ವಿಜ್ಞಾನ ಬಳಗದ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
Discussion about this post