ಕುಮಟಾದ ಮಣಿಕಂಠ ನಾಯ್ಕ ಅವರು ಮೀನು ತರಲು ಹೋದಾಗ ಅವರ ಮೇಲೆ ಆಕ್ರಮಣ ನಡೆದಿದೆ. ಮೀನು ಖರೀದಿಸಲು ಸಾಧ್ಯವಾಗದೇ ಅವರು ಮನೆಗೆ ಮರಳಿದ್ದು, ನಂತರ ಆಸ್ಪತ್ರೆ ಸೇರಿದ್ದಾರೆ.
ಕುಮಟಾ ಹೊಳೆಗದ್ದೆಯ ಮಣಿಕಂಠ ನಾಯ್ಕ ಅವರು ಖಾಸಗಿ ಕಂಪನಿ ಉದ್ಯೋಗಿ. ಜುಲೈ 3ರಂದು ಅವರು ಮೀನು ತರುವುದಕ್ಕಾಗಿ ಮಾರುಕಟ್ಟೆಗೆ ಹೋಗಿದ್ದರು. ಒಳ್ಳೆಯ ಮೀನು ಹುಡುಕಿ ಅವರು ಹೊಳಗದ್ದೆ ಟೋಲ್ ಬಳಿಯ ಬಡಗಣಿ ಮಾರುಕಟ್ಟೆಯಲ್ಲಿ ಹುಡುಕಾಟ ನಡೆಸುತ್ತಿದ್ದರು.
ಆಗ, ಹಳದಿಪುರ ಈರಪ್ಪನಹಿತ್ಲುವಿನ ವಿಘ್ನೇಶ ಹರಿಕಂತ್ರ, ವಿಘ್ನೇಶ್ವರ ಹರಿಕಂತ್ರ ಹಾಗೂ ನಾಗರಾಜ ಹರಿಕಂತ್ರ ಅಲ್ಲಿಗೆ ಬಂದರು. ಈ ಎಲ್ಲರೂ ಸೇರಿ ಅಲ್ಲಿ ಕೆಟ್ಟದಾಗಿ ನಡೆದುಕೊಂಡಿದ್ದು, ಅವರೆಲ್ಲರೂ ಮಣಿಕಂಠ ನಾಯ್ಕ ಅವರನ್ನು ನಿಂದಿಸಿದರು. ಇದಕ್ಕೆ ಮಣಿಕಂಠ ನಾಯ್ಕ ಪ್ರತಿರೋಧವ್ಯಕ್ತಪಡಿಸಿ ಪೆಟ್ಟು ತಿಂದರು.
ಮೊದಲನೆಯದಾಗಿ ವಿಘ್ನೇಶ್ ಹರಿಕಂತ್ರ ಅವರು ಮಣಿಕಂಠ ನಾಯ್ಕ ಅವರಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದರು. ಇದರಿಂದ ಮಣಿಕಂಠ ನಾಯ್ಕ ಅವರ ಮುಖಕ್ಕೂ ಗಾಯವಾಯಿತು. ಉಳಿದವರು ಕಾಲಿನಿಂದ ಒದ್ದು ನೆಲಕ್ಕೆ ದಬ್ಬಿದರು. ಇನ್ನಿತರ ಜನರು ಆಗ ಮಣಿಕಂಠ ನಾಯ್ಕ ಅವರಿಗೆ ಹೊಡೆಬಡಿ ಮಾಡಿ ಬೆದರಿಕೆ ಹಾಕಿದರು.
ಮೀನು ಖರೀದಿಗೆ ಬಂದಿದ್ದ ಮಣ್ಣಿಕಂಠ ನಾಯ್ಕ ಖಾಲಿ ಕೈಯಲ್ಲಿ ಮನೆಗೆ ಹೋದರು. ಕುಟುಂಬದವರ ನೆರವಿನಿಂದ ಅವರು ಕುಮಟಾ ಆಸ್ಪತ್ರೆ ಸೇರಿದರು. ಅದಾದ ಮೇಲೆ ಪೊಲೀಸ್ ಠಾಣೆಗೆ ಹೋಗಿ ಎದುರುದಾರರ ವಿರುದ್ಧ ದೂರು ಕೊಟ್ಟರು.
Discussion about this post