ಭಾರೀ ಪ್ರಮಾಣದ ಬಿರುಕಿನಿಂದ ಕೂಡಿದ್ದ ಶಿರಸಿ ಮರಾಠಿಕೊಪ್ಪದ ರಾಧಾ ನಾಯ್ಕ ಅವರ ಮನೆ ಭಾನುವಾರ ಸಂಜೆ ವೇಳೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಅವಶೇಷಗಳೆಲ್ಲವೂ ಮಣ್ಣಿನ ಅಡಿಗೆ ಬಿದ್ದಿವೆ.
ಮರಾಠಿಕೊಪ್ಪದ ಜೋಡಕಟ್ಟೆ ಹಿಂದೆ ರಾಧಾ ನಾಯ್ಕ ಹಾಗೂ ಗೋಪಾಲ ನಾಯ್ಕ ಕುಟುಂಬದವರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದರು. ಅವರು ವಾಸವಾಗಿದ್ದ ಮನೆ ಮಳೆಗಾಲದ ಅವಧಿಯಲ್ಲಿ ಸೋರುತ್ತಿತ್ತು. ಮನೆ ಗೋಡೆಗಳು ಒಡೆದಿದ್ದವು. ಪ್ರತಿ ವರ್ಷ ಮಳೆಗಾಲದಲ್ಲಿ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದರು. ವರ್ಷದಿಂದ ವರ್ಷಕ್ಕೆ ಮನೆಯಲ್ಲಿನ ಬಿರುಕು ದೊಡ್ಡದಾಯಿತೇ ವಿನಃ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಕಿಂಚಿತ್ತು ಸಹಾಯ ಸಿಗಲಿಲ್ಲ.
ಭಾನುವಾರ ಮನೆಯ ಗೋಡೆಗಳು ಅಲ್ಲಾಡುತ್ತಿದ್ದವು. ಅಷ್ಟರ ಮಟ್ಟಿಗೆ ಭೂ ಕುಸಿತ ಉಂಟಾಗಿದ್ದು, ಗೋಡೆಗಳೆಲ್ಲವೂ ದೊಡ್ಡ ಪ್ರಮಾಣದಲ್ಲಿ ಬಾಯಿ ತೆರೆದುಕೊಂಡಿದ್ದರು. ಶಿರಸಿಯ ಪ್ರಭಾರಿ ತಹಶೀಲ್ದಾರ್ ರಮೇಶ ಹೆಗಡೆ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದರು. ಸುತ್ತಮುತ್ತಲಿನ ಜನರು ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ಇಡೀ ಮನೆ ಕುಸಿದು ಬಿದ್ದಿತು.
`ಪ್ರತಿ ವರ್ಷ ಮನೆ ಖಾಲಿ ಮಾಡಿ ಎಂದು ನೋಟಿಸ್ ಕೊಡಲಾಗುತ್ತಿದೆ. ಪರ್ಯಾಯ ವ್ಯವಸ್ಥೆ ಯಾರೂ ಮಾಡಿಲ್ಲ’ ಎಂದು ಕುಟುಂಬದವರು ನೋವು ಹಂಚಿಕೊoಡರು. ಮನೆ ಕುಸಿದು ಬೀಳುವ ವೇಳೆ ಕುಟುಂಬದವರೆಲ್ಲರೂ ಹೊರಗಿದ್ದು ಜೀವ ಉಳಿಸಿಕೊಂಡರು.
ಮನೆ ಮುರಿದು ಬಿದ್ದ ವಿಡಿಯೋ ಇಲ್ಲಿ ನೋಡಿ..
Discussion about this post