RSS ನಿಷೇಧದ ಬಗ್ಗೆ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಮಾತನಾಡಿದ್ದು `ಇದು ಒಂದು ತಿರುಕನ ಕನಸು’ ಎಂದು ಯಲ್ಲಾಪುರ ಬಿಜೆಪಿ ಮುಖಂಡ ರಾಮು ನಾಯ್ಕ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ ಬಂದ ನಂತರ ಈವರೆಗೆ ಮೂರು ಬಾರಿ RSS ನಿಷೇಧಕ್ಕೆ ಪ್ರಯತ್ನ ನಡೆದಿದ್ದು, ಅದು ಸಾಧ್ಯವಾಗಿಲ್ಲ. ಈಗಲೂ ಅದು ಅಸಾಧ್ಯ’ ಎಂದು ಅವರು ಹೇಳಿಕೆ ನೀಡಿದ್ದಾರೆ.
`ಮಾಜಿ ಪ್ರಧಾನಿ ಜವಾಹರಲಾಲ ನೆಹರು, ಇಂದಿರಾಗಾ0ಧಿ, ನರಸಿಂಹರಾವ್ ಮೊದಲಾದವರು RSS ನಿಷೇಧಕ್ಕೆ ಆಸಕ್ತಿಹೊಂದಿದ್ದರು. ಆದರೆ, ಅವರಿಂದ ಅದು ಸಾಧ್ಯವಾಗಿಲ್ಲ. ಹೀಗಿರುವಾಗ ಪ್ರಿಯಾಂಕ ಖರ್ಗೆಯವರಿಂದ ನಿಷೇಧ ಸಾಧ್ಯವೇ?’ ಎಂದು ರಾಮು ನಾಯ್ಕ ಪ್ರಶ್ನಿಸಿದ್ದಾರೆ. RSS ಅಪ್ಪಟ ದೇಶಭಕ್ತ ಸಂಘಟನೆ. ಈ ದೇಶದ ಜೀವಾಳವಾಗಿರುವ ಈ ಸಂಘಟನೆ 100 ವರ್ಷದ ಭದ್ರ ಬುನಾದಿ ಹೊಂದಿದೆ. ಸಾವಿರಾರು ಶಾಖೆ, ಲಕ್ಷಾಂತರ ಸ್ವಯಂ ಸೇವಕರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಇಂಥ ಸಂಘಟನೆಯನ್ನು ಕೆಣಕುವುದು ಅಷ್ಟು ಸುಲಭದ ಮಾತಲ್ಲ’ ಎಂದವರು ಅನಿಸಿಕೆವ್ಯಕ್ತಪಡಿಸಿದ್ದಾರೆ.
`SDPI-SFI ಮುಂತಾದ ಸಂಘಟನೆಗಳ ಜೊತೆಗೆ ತಳಕು ಹಾಕಿಕೊಂಡವರಿಗೆ RSS ಹಿನ್ನಲೆ ಅರಿವಿಲ್ಲ. ಚುನಾವಣೆ ವೇಳೆ ಅಧಿಕಾರಕ್ಕೆ ಬರುವ ಹಪಾಹಪಿಯಲ್ಲಿ ಕಾಂಗ್ರೆಸ್ಸಿಗರು ಇಲ್ಲಸಲ್ಲದ ಸಾಹಸ ಮಾಡುತ್ತಿದ್ದಾರೆ. ಶತಮಾನದ ಇತಿಹಾಸವನ್ನು ಕಾಣುತ್ತಿರುವ RSS ಜನಮಾನಸದ ಉತ್ತುಂಗದಲ್ಲಿದೆ. ಅದೇ ಶತಮಾನದ ಇತಿಹಾಸವನ್ನು ಕಂಡಿರುವ ಕಾಂಗ್ರೆಸ್ ನಿಮ್ಮಂಥ ವಾಚಾಳಿಗಳ ಕೈಯಲ್ಲಿ ಸಿಕ್ಕಿ ಪಾತಾಳ ಕಾಣುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
Discussion about this post