ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ-ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಯಾಣಕ್ಕೆ ಪ್ರವಾಸಿಗರ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ. ಭಾರೀ ಪ್ರಮಾಣದ ಮಳೆ ಹಿನ್ನಲೆ ರಸ್ತೆಗೆ ಅಡ್ಡಲಾಗಿ ನಿಷೇಧದ ನಾಮಫಲಕ ಅಳವಡಿಸಲಾಗಿದೆ.
ಜುಲೈ 1ರಂದು ಈ ಭಾಗದಲ್ಲಿ ನಿಷೇಧ ಹೇರಲಾಗಿತ್ತು. ಅದಾದ ನಂತರ ಒಮ್ಮೆ ನಿಷೇಧ ತೆರವು ಮಾಡಲಾಗದ್ದು, ಈ ದಿನ ಮತ್ತೊಮ್ಮೆ ನಿಷೇಧ ಹೇರಲಾಗಿದೆ. ಭಾನುವಾರ ಸಾಕಷ್ಟು ಪ್ರವಾಸಿಗರು ಯಾಣದ ಕಡೆ ಮುಖ ಮಾಡಿದ್ದು ಅವರೆಲ್ಲರೂ ನಾಮಫಲಕ ನೋಡಿ ಅಲ್ಲಿಂದಲೇ ಊರಿನ ಕಡೆ ಮರಳಿದ್ದಾರೆ.
ADVERTISEMENT
ಧಾರಾಕಾರ ಮಳೆ ಹಿನ್ನಲೆ ಸುರಕ್ಷತೆ ದೃಷ್ಠಿಯಿಂದ ಯಾಣ ಪ್ರವೇಶಕ್ಕೆ ತಡೆ ಒಟ್ಟಲಾಗಿದೆ. ಕುಮಟಾ-ಶಿರಸಿ ಮಾರ್ಗದ ಕತಗಾಲ ಬಳಿ ಈ ನಾಮಫಲಕ ಅಳವಡಿಸಲಾಗಿದೆ. ಜೊತೆಗೆ ಬ್ಯಾರಿಕೇಟ್ ಸಹ ಅಳವಡಿಸಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಭಾನುವಾರ ಮಧ್ಯಾಹ್ನ ಇಲ್ಲಿ ನಾಮಫಲಕ ಹಾಗೂ ಬ್ಯಾರಿಕೇಟ್ ಅಳವಡಿಸಿದ್ದು, ಇದರ ಅರಿವಿಲ್ಲದೇ ಆಗಮಿಸಿದ ಜನ ನಿರಾಸೆಯಿಂದ ಮರಳಿದರು.
ADVERTISEMENT
Discussion about this post