ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಗುರುತಿಸಿದ್ದಾರೆ. ಅಂಥವರ ಯಾದಿ ಬಿಡುಗಡೆಯಾಗಿದ್ದು, ಎರಡು ದಿನದ ಕಾರ್ಯಾಚರಣೆಯಲ್ಲಿ ಯಲ್ಲಾಪುರದಲ್ಲಿ ಅತಿ ಹೆಚ್ಚು ಅಕ್ರಮ ಮದ್ಯ ಮಾರಾಟಗಾರರು ಸಿಕ್ಕಿ ಬಿದ್ದಿದ್ದಾರೆ.
ಅಂಕೋಲಾ, ಶಿರಸಿ, ಯಲ್ಲಾಪುರ, ಮುಂಡಗೋಡು, ಹೊನ್ನಾವರದಲ್ಲಿ ಪೊಲೀಸರು ಅಕ್ರಮ ಮದ್ಯ ಮಾರಾಟಗಾರರ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಯಲ್ಲಾಪುರದ ಹುಣಶೆಟ್ಟಿಕೊಪ್ಪದ ಸತೀಶ ತಿನ್ನೇಕರ್, ಹುಣಶೆಟ್ಟಿಕೊಪ್ಪದ ಚಂದ್ರಕಾ0ತ ತಿನ್ನೇಕರ್, ಕಿರವತ್ತಿ ಜಯಂತನಗರದ ಶೇಖರ್ ಗೋಸಾವಿ, ಹೊಸಳ್ಳಿಯ ವ್ಯಾಪಾರಿ ನಾಗೇಶ ಮೇತ್ರಿ, ಕಿರವತ್ತಿ ಗ್ರಾಮದೇವಿಗಲ್ಲಿಯಲ್ಲಿ ಕಿರಾಣಿ ಅಂಗಡಿ ನಡೆಸುವ ಈಶ್ವರ ಜಗದಾಳಿ ಹಾಗೂ ಹಾಸಣಗಿ ಗೋಸಗದ್ದೆಯ ಒಳ್ಳೆಸರ ಗೂಡಂಗಡಿ ನಡೆಸುವ ಚಂದ್ರಶೇಖರ ಮಗೇರ್ ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ.
ಮಂಚಿಕೇರಿಯ ಕಂಪ್ಲಿಯ ಕಮಲಾಕರ ನಾಯ್ಕ ಹಾಗೂ ಮಂಚಿಕೇರಿಯ ರಾಜು ನಾಯ್ಕ ಸಹ ಮದ್ಯ ಅಕ್ರಮವಾಗಿ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ಅಂಕೋಲಾ ತಾಲೂಕಿನಲ್ಲಿ ಗೂಡಂಗಡಿ ನಡೆಸುವ ನಾಗರಾಜ ನಾಯ್ಕ ಆಂದ್ಲೆ ಹಾಗೂ ಮುರಾರಿ ನಾಯ್ಕ ಬೊಬ್ರುವಾಡ ಮದ್ಯ ಮಾರಾಟದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಕಾರವಾರದ ತೋಡೂರಿನ ರಿಕ್ಷಾ ಚಾಲಕ ಮಾರುತಿ ನಾಯ್ಕ, ಅಸ್ನೋಟಿಯ ಕುಳಗೆಯಲ್ಲಿ ಗೂಡಂಗಡಿ ನಡೆಸುವ ಅಮಿತಾ ಬಾಂದೇಕರ್ ಹಾಗೂ ಬಿಣಗಾ ಒಕ್ಕಲಕೇರಿಯ ಮೀನು ಮಾರಾಟಗಾರ ಸತೀಶ ಗೌಡ ಸಹ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಶಿರಸಿ ಮತ್ತಿಘಟ್ಟಾ ಮುಂಡಿಗೆಮನೆಯ ಹೊಟೇಲ್ ವ್ಯಾಪಾರಿ ಗಜಾನನ ಕಲಸಿ ಸಹ ಮದ್ಯ ಮಾರಾಟ ಮಾಡುತ್ತಿದ್ದರು. ಬನವಾಸಿ ಬಳಿ ಶಿರಸಿ ಕೊರ್ಲಕಟ್ಟಾದಲ್ಲಿ ಅಡುಗೆ ಕೆಲಸ ಮಾಡುವ ಪುರಂಧರ ನಾಯ್ಕ, ಕಾಯಿಗುಡ್ಡೆ ಕೋಣೂರಿನ ಶ್ರೀಧರ ನಾಯ್ಕ ಹಾಗೂ ಶಿರಸಿ ಸುಗಾವಿಯ ಚಂದ್ರ ಮೊಗೇರ್ ಅಕ್ರಮ ಮದ್ಯ ಮಾರಾಟ ನಡೆಸಿದ್ದು ಅವರ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಮುಂಡಗೋಡಿನ ಚಡವಳ್ಳಿಯಲ್ಲಿ ಕಿರಾಣಿ ಅಂಗಡಿ ನಡೆಸುವ ನಾರಾಯಣ ಮಾಣಪ್ಪನವರ್, ನಂದಿಕಟ್ಟಾದಲ್ಲಿ ಹೊಟೇಲ್ ನಡೆಸುವ ಉದಯಕುಮಾರ ಕವಟೆ, ಹನುಮಾಪುರದ ಹೊಟೇಲ್ ವ್ಯಾಪಾರಿ ಸತೀಶ ವಾಲ್ಮಿಕಿ, ಮಾರಿಕಾಂಬಾ ಓಣಿಯ ಹೊಟೇಲ್ ಉದ್ಯಮಿ ಸಂಜಯ ಚವ್ಹಾಣ ಸಹ ಅಕ್ರಮ ಮದ್ಯ ಮಾರಾಟಗಾರರಾಗಿದ್ದಾರೆ. ಹೊನ್ನಾವರ ಉಪ್ಪೋಣಿಯ ಕಿರಾಣಿ ಅಂಗಡಿ ಮಾಲಕ ಕೇಶವ ನಾಯ್ಕ ಅವರು ಮದ್ಯ ಮಾರಾಟ ಮಾಡುತ್ತಿದ್ದು, ಈ ಎಲ್ಲರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discussion about this post