ಕಾರವಾರದಲ್ಲಿ ಮನೆ ಮಾಡಿಕೊಂಡಿದ್ದ ದಂಪತಿ ನಿಗೂಢ ನಾಪತ್ತೆಯಾಗಿದ್ದು, ಅವರ ಫೋನ್ ಸಹ ಸ್ವಿಚ್ ಆಫ್ ಬರುತ್ತಿದೆ.
ಕಾರವಾರದ ಸದಾಶಿವಗಡದ ಕಣಸಗಿರಿಯ ಮಹಾದೇವಸ್ಥಾನದ ಬಳಿ ಸಂತೋಷ ದೇವದಾಸ ಅವರು ಪತ್ನಿ ದಿವ್ಯಾ ದೇವದಾಸ್ ಅವರ ಜೊತೆ ವಾಸವಾಗಿದ್ದರು. ಸಂತೋಷ ಅವರು ಬಾಡಿಗೆ ಕಾರಿನ ಚಾಲಕರಾಗಿ ಜೀವನ ನಡೆಸುತ್ತಿದ್ದರು. ದಿವ್ಯಾ ಅವರು ಡಾ ಅಣ್ವೇಕರ ಕ್ಲಿನಿಕ್‌ಲಿ ರಿಸೆಪನಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದರು.
ಜೂನ್ 27ರ ಸಂಜೆ 7 ಗಂಟೆಗೆ ಅವರಿಬ್ಬರು ಮನೆಗೆ ಬೀಗ ಹಾಕಿ ಹೊರಟಿದ್ದರು. ಮನೆ ಮುಂದಿದ್ದ ಸ್ಕೂಟಿ ಮೇಲೆ ಹೊರಟ ಅವರು ಎಷ್ಟು ಹೊತ್ತಾದರೂ ಮರಳಲಿಲ್ಲ. ಅವರ ಮೊಬೈಲಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತಿದ್ದು, ಆ ದಂಪತಿ ಎಲ್ಲಿ ಹೋದರು? ಎಂದು ಗೊತ್ತಾಗಲಿಲ್ಲ.
ಇಷ್ಟು ದಿನಗಳ ಕಾಲ ಕುಟುಂಬದವರು ಆ ದಂಪತಿಯನ್ನು ಎಲ್ಲಾ ಕಡೆ ಹುಡುಕಿದರು. ಸ್ಕೂಟಿಯೂ ಸಿಗಲಿಲ್ಲ. ಆ ದಂಪತಿಯ ಸುಳಿವು ಗೊತ್ತಾಗಲಿಲ್ಲ. ಕೊನೆಗೆ ಕುಟುಂಬದವರೆಲ್ಲರೂ ನಿರ್ಧರಿಸಿ ಚಿತ್ತಾಕುಲ ಪೊಲೀಸ್ ಠಾಣೆಗೆ ಬಂದರು. ಸಂತೋಷ ಅವರ ತಾಯಿ ರಾಜಶ್ರೀ ದೇವದಾಸ್ ಅವರು ಪೊಲೀಸರ ಬಳಿ ಸಮಸ್ಯೆ ಹೇಳಿಕೊಂಡರು.
ಪೊಲೀಸರು ಸಹ ಅವರಿಬ್ಬರ ಮೊಬೈಲಿಗೆ ಫೋನ್ ಮಾಡಿದರು. ಆದರೂ, ಸಂಪರ್ಕ ಸಾಧ್ಯವಾಗಲಿಲ್ಲ. ಹೀಗಾಗಿ ಪ್ರಕರಣ ದಾಖಲಿಸಿಕೊಂಡು ಅವರಿಬ್ಬರ ಹುಡುಕಾಟ ಶುರು ಮಾಡಿದರು.
Discussion about this post