ಮುಂಡಗೋಡ ಪಟ್ಟಣದಲ್ಲಿದ್ದ ಬೈಕ್ ಕಳ್ಳತನ ಮಾಡಿದ್ದ ಮಂಚಿಕೇರಿಯ ನಾಸೀರ ಅಹ್ಮದ್ ಸಯ್ಯದ್ ಸಿದ್ದಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ಜೈಲಿಗೆ ಕಳುಹಿಸಲಾಗಿದೆ.
ಮುಂಡಗೋಡಿನ ನ್ಯಾಸರ್ಗಿ ಪ್ಲಾಟಿನ ಮುತ್ತಣ್ಣ ಬೋವಿ ಅವರ ಬೈಕು ಕಳ್ಳತನವಾಗಿತ್ತು. ಮೇ 30ರಂದು ಪಟ್ಟಣ ಪಂಚಾಯತ ಎದುರಿನ ನೌಕರರ ಭವನದ ಬಳಿ ಬೈಕ್ ನಿಲ್ಲಿಸಿದ್ದ ಮುತ್ತಣ್ಣ ಬೋವಿ ಅವರು ಟಾಟಾ ಎಸ್ ವಾಹನ ಏರಿ ಕೆಲಸಕ್ಕೆ ಹೊರಟಿದ್ದರು. ಮರಳಿ ಬಂದು ನೋಡಿದಾಗ ಅಲ್ಲಿ ಬೈಕ್ ಇರಲಿಲ್ಲ.
ಎಲ್ಲಾ ಕಡೆ ಹುಡುಕಾಟದ ನಂತರವೂ ಬೈಕ್ ಸಿಗದ ಕಾರಣ ಅವರು ಪೊಲೀಸರ ಮೊರೆ ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರವಾರದ ಟೆಕ್ನಿಕಲ್ ವಿಭಾಗದ ಉದಯ ಗುನಗಾ ಅವರ ನೆರವುಪಡೆದರು. ಉದಯ ಗುನಗಾ ಅವರು ವಿವಿಧ ತಂತ್ರಜ್ಞಾನ ಬಳಸಿ ಕಳ್ಳನನ್ನು ಗುರುತಿಸಿದರು. ಉದಯ ಗುನಗಾ ಅವರು ನೀಡಿದ ಮಾಹಿತಿ ಮೇರೆಗೆ ಮುಂಡಗೋಡು ಪಿಐ ರಂಗನಾಥ ನೀಲಮ್ಮನವರ್ ಅವರು ನಾಸೀರ ಅಹ್ಮದ್ ಸಯ್ಯದ್ ಸಿದ್ದಿ ಮಂಚಿಕೇರಿಯಲ್ಲಿರುವುದನ್ನು ಪತ್ತೆ ಮಾಡಿದರು.
ಪಿಎಸ್‌ಐ ವಿನೋದ ಎಸ್ ಕೆ ಹಾಗೂ ಪರಶುರಾಮ ಮಿರ್ಜಗಿ ನಾಸೀರ ಅಹ್ಮದ್ ಸಯ್ಯದ್ ಸಿದ್ದಿಯ ಚಲನ ವಲನ ಗಮನಿಸಿದರು. ಪೊಲೀಸ್ ಸಿಬ್ಬಂದಿ ಮಂಜು ಚಂಚಲಿ, ಕೋಟೇಶ್ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ್ ಹಾಗೂ ಬಸವರಾಜ ಲಂಬಾಣಿ ಜೊತೆ ಸೇರಿ ನಾಸೀರ ಅಹ್ಮದ್ ಸಯ್ಯದ್ ಸಿದ್ದಿಯನ್ನು ವಶಕ್ಕೆಪಡೆದರು. ಆತ ಬೈಕ್ ಕದ್ದಿರುವುದನ್ನು ಒಪ್ಪಿಕೊಂಡಿದ್ದು, ಪೊಲೀಸರು ನಾಸೀರ ಅಹ್ಮದ್ ಸಯ್ಯದ್ ಸಿದ್ದಿಯನ್ನು ಜೈಲಿಗೆ ಕಳುಹಿಸಿದರು.
Discussion about this post