ಕಾರವಾರ-ಅಂಕೋಲಾ ಭಾಗದ ಹಾರವಾಡ ಕಡಲತೀರದಲ್ಲಿ ಕಳೆದ ಒಂದು ವಾರದಿಂದ ನಿರಂತರ ಕಡಲ ಕೊರೆತ ಉಂಟಾಗುತ್ತಿದೆ. ಕಡಲ ಆರ್ಭಟಕ್ಕೆ ತಡೆಗೋಡೆ, ಉಸುಕಿನ ದಿಬ್ಬಗಳು ಸಹ ನೀರು ಪಾಲಾಗುತ್ತಿದೆ.
ಕಡಲ ಕೊರೆತದ ಬಗ್ಗೆ ಆ ಭಾಗದ ಜನ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರಿಗೆ ತಿಳಿಸಿದ್ದು, ಗಣಪತಿ ಉಳ್ವೇಕರ್ ಅವರು ಮಂಗಳವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರೀಯಾ ಅವರೊಂದಿಗೆ ಸ್ಥಳ ಭೇಟಿ ಮಾಡಿದರು.
ADVERTISEMENT
ಬಂದರು ಇಲಾಖೆ ಅಧಿಕಾರಿಗಳು, ಮೀನುಗಾರಿಕಾ ಇಲಾಖೆ ಹಾಗೂ ಅಂಕೋಲಾ ತಹಶೀಲ್ದಾರ್ ಬಳಿ ಸಮಸ್ಯೆ ಬಗ್ಗೆ ಚರ್ಚಿಸಿದರು. ಸಮುದ್ರ ಕೊರತೆ ನಿಯಂತ್ರಿಸಲು ಹಾಗೂ ತಡೆಗೋಡೆ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಅವರು ಬಂದರು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ADVERTISEMENT
Discussion about this post