ಹೊನ್ನಾವರ ಹೆದ್ದಾರಿ ಪಕ್ಕ ಅಣಬೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಚಾಲಕನೊಬ್ಬ ತನ್ನ ಕಾರು ಹಾಯಿಸಿದ್ದು, ಅಣಬೆ ಮಾರಾಟಗಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಆದರೆ, ದಿಢೀರ್ ಆಗಿ ಕಾರು ನಿಂತಿದ್ದರಿoದ ಹಿಂದಿನಿoದ ಬರುತ್ತಿದ್ದ ಬೈಕು ಕಾರಿಗೆ ಗುದ್ದಿದೆ.
ಜುಲೈ 5ರಂದು ಕುಮಟಾದ ಸುಧೀಂದ್ರ ಭಟ್ಟ ಅವರು ಭಟ್ಕಳದಿಂದ ಹೊನ್ನಾವರ ಕಡೆ ಕಾರು ಓಡಿಸುತ್ತಿದ್ದರು. ಹೆದ್ದಾರಿ ಪಕ್ಕ ಅಣಬೆ ಮಾರುತ್ತಿದ್ದ ವ್ಯಕ್ತಿಯನ್ನು ನೋಡಿದ ಅವರು ಏಕಾಏಕಿ ಅಣಬೆ ಮಾರುವವನ ಕಡೆ ಕಾರು ತಿರುಗಿಸಿದರು. ಒಮ್ಮೆಲೆ ಬ್ರೆಕ್ ಹಾಕಿ ಕಾರು ನಿಲ್ಲಿಸಿದರು. ಈ ವೇಳೆ ಹೆದರಿದ ಅಣಬೆ ಮಾರಾಟಗಾರ ಅಲ್ಲಿಂದ ಹಾರಿ ತಪ್ಪಿಸಿಕೊಂಡರು.
ಆದರೆ, ಕಾರಿನ ಹಿಂದೆ ಬೈಕು ಓಡಿಸಿಕೊಂಡು ಬರುತ್ತಿದ್ದ ಜಿ ರಂಜಿತಕುಮಾರ್ ಅವರು ತಮ್ಮ ಬೈಕನ್ನು ಕಾರಿಗೆ ಗುದ್ದಿದರು. ಇದರಿಂದ ಬೈಕಿನಿಂದ ಬಿದ್ದು ಅವರು ಪೆಟ್ಟು ಮಾಡಿಕೊಂಡರು. ಭಟ್ಕಳದ ಪಿಎಲ್‌ಡಿ ಬ್ಯಾಂಕಿನಲ್ಲಿ ಪಿಗ್ಮಿ ಸಂಗ್ರಹಿಸುವ ಮೇಲಿನ ಇಡಗುಂಜಿಯ ಗಜಾನನ ನಾಯ್ಕ ಅವರು ಇದನ್ನು ನೋಡಿದರು. ಮಂಕಿ ಪೊಲೀಸ್ ಠಾಣೆಗೆ ತೆರಳಿ ಅಪಘಾತದ ಬಗ್ಗೆ ಅವರು ಮಾಹಿತಿ ನೀಡಿದರು.
Discussion about this post