ಅಂಕೋಲಾದ ದುರ್ಗಾ ಮೋಟಾರ್ಸ ಕಂಪನಿಗೆ ಕೆಲಸ ಕೇಳಿಕೊಂಡು ಬಂದ ಹಟ್ಟಿಕೇರಿಯ ಸರ್ವೇಶ ನಾಯ್ಕ ಅವರನ್ನು ಕಂಪನಿಯವರು ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡಿದ್ದು, 10 ತಿಂಗಳ ಅವಧಿಯಲ್ಲಿ ಅವರು 29 ಲಕ್ಷ ರೂ ದೋಚಿದ್ದಾರೆ. ವಾಹನಗಳ ಬಿಡಿಭಾಗ ಮಾರಾಟ ಮಾಡಿಯೇ ಅವರು ಇಷ್ಟೊಂದು ಹಣಗಳಿಸಿದ್ದಾರೆ.
ಮಂಗಳೂರಿನ ಉದಯ ನಾಯ್ಕ ಅವರು ಅಂಕೋಲಾದಲ್ಲಿ ದುರ್ಗಾ ಮೋಟಾರ್ಸ ಕಂಪನಿ ಶುರು ಮಾಡಿದ್ದರು. ಉದಯ ನಾಯ್ಕ ಅವರು ಕಂಪನಿಯ ಪಾಲುದಾರರಾಗಿದ್ದರು. ಅಶೋಕ ಲೈಲಾಂಡ್ ವಾಹನದ ಅಧಿಕೃತ ಡೀಲರ್ ಆಗಿ ದುರ್ಗಾ ಮೋಟಾರ್ಸ ಕೆಲಸ ಮಾಡುತ್ತಿದ್ದು, ಹಟ್ಟಿಕೇರಿಯ ಸರ್ವೇಶ ನಾಯ್ಕ ಅವರು ಅಲ್ಲಿ ಕೆಲಸ ಕೇಳಿಕೊಂಡು ಬಂದಿದ್ದರು. ಕಂಪನಿಯವರು ಸರ್ವೇಶ ನಾಯ್ಕ ಅವರನ್ನು ವರ್ಕಶಾಫ್ ಮ್ಯಾನೇಜರ್ ಎಂದು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಮೊದಲ ಎರಡು ತಿಂಗಳು ಸರ್ವೇಶ ನಾಯ್ಕ ಅವರು ಅತ್ಯಂತ ಪ್ರಾಮಾಣಿಕವಾಗಿ ದುಡಿದರು. ಕಂಪನಿಯವರ ನಂಬಿಕೆಗಳಿಸಿದ ನಂತರ ತಮ್ಮ ವಕ್ರಬುದ್ದಿಯ ಶುರು ಮಾಡಿದರು.
ಸರ್ವಿಸ್ ಮಾಡಿಸಲು ದುರ್ಗಾ ಮೋಟಾರ್ಸಗೆ ಬರುತ್ತಿದ್ದ ವಾಹನಗಳಿಗೆ ಸರ್ವೇಶ್ ನಾಯ್ಕ ಅವರು ವಿಶೇಷ ಆಫರ್ ನೀಡಿದ್ದರು. ಇದಕ್ಕಾಗಿ ಜಾಬ್ ಕಾರ್ಡ ಎಂಬ ಯೋಜನೆಯನ್ನು ಶುರು ಮಾಡಿದ್ದರು. ವಿಶೇಷ ರಿಯಾಯತಿ ದರದಲ್ಲಿ ಬಿಡಿಭಾಗಗಳನ್ನು ಪೂರೈಸುವುದಾಗಿ ಅವರು ವಾಹನ ಸವಾರರಿಗೆ ತಿಳಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಯೋಜನೆ ಬಗ್ಗೆ ಪ್ರಚಾರ ಮಾಡಿಕೊಂಡಿದ್ದ ಅವರು ಡಿಸ್ಕೊಂಟ್ ಹೆಸರಿನಲ್ಲಿ ವ್ಯವಹಾರ ಮಾಡುತ್ತಿದ್ದರು. ಅಶೋಕ್ ಲೈಲೆಂಡ್ ಕಂಪನಿಯಿAದ ಬಿಡಿಭಾಗಗಳನ್ನು ತರಿಸುತ್ತಿದ್ದ ಅವರು ಅದನ್ನು ವಾಹನಗಳಿಗೆ ಜೋಡಿಸುವ ಅನುಮತಿಪಡೆದಿದ್ದರು. ಆದರೆ, ವ್ಯವಹಾರದ ಹಣವನ್ನು ಮಾತ್ರ ಕಂಪನಿಗೆ ಕೊಡಲಿಲ್ಲ.
ಒಟ್ಟು 2998254ರೂ ವಂಚನೆಯಾದ ಬಗ್ಗೆ ಉದಯ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ಕಾರವಾರ ಸಿಇಎನ್ ಪೊಲೀಸರು ಸರ್ವೇಶ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ.
Discussion about this post