ಮೇಷ ರಾಶಿ: ನೀವು ಅಂದುಕೊಂಡಂಥ ಎಲ್ಲಾ ಕೆಲಸಗಳು ಈ ದಿನ ನಡೆಯಲಿದೆ. ಗುರುವಿನ ಆಶೀರ್ವಾದವನ್ನು ಪಡೆದು ಕೆಲಸ ಶುರು ಮಾಡಿ. ಆರೋಗ್ಯ ಸ್ಥಿತಿಯೂ ಸುಧಾರಿಸಲಿದೆ. ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳಿ.
ವೃಷಭ ರಾಶಿ: ಅನಿರೀಕ್ಷಿತ ಧನ ಆಗಮನವಾಗಲಿದೆ. ಉದ್ಯೋಗವನ್ನು ಹುಡುಕುತ್ತಿದ್ದವರಿಗೆ ಉದ್ಯೋಗ ಸಿಗಲಿದೆ. ಒಳ್ಳೆಯ ಕೆಲಸಗಳಿಗೆ ಈ ದಿನ ಅತ್ಯಂತ ಸೂಕ್ತ.
ಮಿಥುನ ರಾಶಿ: ಕೌಟುಂಬಿಕ ಜೀವನ ಅತ್ಯಂತ ಸಂತೋಷದಾಯಕವಾಗಿರುತ್ತದೆ. ವ್ಯವಹಾರದಲ್ಲಿ ಕೂಡ ಲಾಭವಾಗಲಿದೆ.
ಕರ್ಕಾಟಕ ರಾಶಿ: ತಾಳ್ಮೆಯಿಂದ ಇರುವುದು ಉತ್ತಮ. ನಕಾರಾತ್ಮಕ ವಿಷಯಗಳಿಗೆ ಕಿವಿಗೊಡಬೇಡಿ. ನೀವು ತೆಗೆದುಕೊಳ್ಳುವ ಆಹಾರದ ಬಗ್ಗೆ ಗಮನವಿಡಿ.
ಸಿಂಹ ರಾಶಿ: ಈ ದಿನ ನಿಮಗೆ ಹೆಚ್ಚು ಲಾಭವಾಗಿರಲಿದೆ. ಕುಟುಂಬದ ಸದಸ್ಯರ ಜೊತೆ ಹೆಚ್ಚು ಸಮಯವನ್ನು ಕಳೆಯುತ್ತೀರಿ. ಇಂದಿನ ದಿನ ನಿಮಗೆ ಪ್ರಯಾಣಕ್ಕೆ ಉತ್ತಮವಾಗಿರುವುದಿಲ್ಲ.
ಕನ್ಯಾ ರಾಶಿ: ಆಪ್ತರ ಜೊತೆ ತಪ್ಪು ಗೃಹಿಕೆ ಆಗುವ ಸಾಧ್ಯತೆಯಿದೆ. ವಾಹನ-ಭೂಮಿ ಖರೀದಿಗೆ ಯೋಗ್ಯ ದಿನವಲ್ಲ. ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿಲಿದೆ.
ತುಲಾ ರಾಶಿ: ನೀವು ಇರುವಂತಹ ಕ್ಷೇತ್ರದಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತೀರಿ. ಅದರ ಜೊತೆಯಲ್ಲಿ ಭಡ್ತಿಯನ್ನು ಪಡೆಯಲಿದ್ದೀರಿ. ಆರೋಗ್ಯವು ಕೂಡ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ: ತಾಳ್ಮೆಯಿಂದ ಇರುವಂತಹದ್ದು ಉತ್ತಮ. ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಕ್ರಮವನ್ನು ಬದಲಾಯಿಸಿ. ವೃತ್ತಿ ಕ್ಷೇತ್ರದಲ್ಲಿ ಕೋಪ ಮಾಡಿಕೊಳ್ಳಬೇಡಿ.
ಧನು ರಾಶಿ: ಭಾವನಾತ್ಮಕ ಸ್ಥಿರತೆಯನ್ನು ಕಂಡುಕೊಳ್ಳಿ. ಗುರುವಿನ ಆಶೀರ್ವಾದವನ್ನು ಪಡೆದುಕೊಳ್ಳಿ. ಆರೋಗ್ಯ ಸುಧಾರಣೆಯಾಗಲಿದೆ. ಉದ್ಯೋಗ ಕ್ಷೇತ್ರ ಎಂದಿನಂತೆ ಇರಲಿದೆ.
ಮಕರ ರಾಶಿ: ನೀವು ಮಾಡುವಂತ ಕೆಲಸದಲ್ಲಿ ಸ್ವಲ್ಪ ಬೇಜಾರಿನ ಸಂಗತಿ ನಡೆಯಬಹುದು. ಹೊಸ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಉದ್ಯೋಗಾವಕಾಶ ಸಾಧ್ಯತೆಯಿದೆ.
ಕುಂಭ ರಾಶಿ: ಈ ದಿನ ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುತ್ತೀರಿ. ಆರ್ಥಿಕ ಪರಿಸ್ಥಿತಿಯ ಬಗ್ಗೆ ಚಿಂತೆ ಬರಲಿದೆ. ಆರೋಗ್ಯದ ದೃಷ್ಟಿಯಿಂದ ಹೊಟ್ಟೆಯ ಭಾಗದ ಲಕ್ಷ ವಹಿಸಿ.
ಮೀನ ರಾಶಿ: ನಿಮ್ಮ ಸಂಗಾತಿಯ ಜೊತೆ ತಾಳ್ಮೆಯಿಂದ ಇರಿ. ನಿಮ್ಮ ವೃತ್ತಿ ಕ್ಷೇತ್ರ ಸುಧಾರಿಸಲಿದೆ. ದೂರದ ಪ್ರಯಾಣ ನಿಮಗೆ ಸಮಸ್ಯೆ ತರಬಹುದು
Discussion about this post