ಅನೇಕರ ಪಾಲಿಗೆ ಆಪತ್ಪಾಂದವ ಎಂಬ ಮುಖವಾಡದೊಂದಿಗೆ ಅನೇಕ ವರ್ಷಗಳಿಂದ ಕಾಸಿಗಾಗಿ ರೋಗಿಗಳನ್ನು ಪೀಡಿಸುತ್ತಿದ್ದ ಕಾರವಾರದ ಸರ್ಕಾರಿ ವೈದ್ಯ ಡಾ ಶಿವಾನಂದ ಕುಡ್ತಳಕರ್ ಈ ದಿನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಡಾ ಶಿವಾನಂದ ಕುಡ್ತಳ್ಳಕರ್ ಅವರು ಸ್ತ್ರೀ ರೋಗ ತಜ್ಞರಾಗಿದ್ದರು. ಅವರ ವೈದ್ಯಕೀಯ ಕೆಲಸ ಹಾಗೂ ಕೈ ಗುಣದ ಬಗ್ಗೆ ಜನ ಮೆಚ್ಚುಗೆವ್ಯಕ್ತಪಡಿಸಿದ್ದರು. ಖಾಸಗಿ ಕ್ಲಿನಿಕ್’ನ್ನು ನಡೆಸುತ್ತಿದ್ದ ಅವರು ಅಲ್ಲಿಯೂ ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದರು. ಹೆರಿಗೆಗೆ ಬರುವ ಬಡವರನ್ನು ಬಿಡದೇ ಅವರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಾಸು ಕೇಳುತ್ತಿದ್ದರು.
ಡಾ ಶಿವಾನಂದ ಕುಡ್ತಳಕರ್ ಅವರ ಮೇಲಿನ ಭಯ-ಭಕ್ತಿಯಿಂದ ರೋಗಿಗಳು ಅವರು ಕೇಳಿದ ಅರ್ದದಷ್ಟು ಹಣವನ್ನಾದರೂ ಕೊಟ್ಟು ಬರುತ್ತಿದ್ದರು. ಆದರೆ, ಈ ಬಗ್ಗೆ ಅನೇಕರು ಆರೋಪ ಮಾಡಿದ್ದರೂ ಅಧಿಕೃತ ದೂರು ಕೊಟ್ಟಿರಲಿಲ್ಲ. 2020ರ ಅವಧಿಯಲ್ಲಿ ಗೀತಾ ಭಾನಾವಳಿ ಎಂಬ ಬಾಣಂತಿ ಸಾವಿನ ವಿಷಯದಲ್ಲಿ ಡಾ ಶಿವಾನಂದ ಕುಡ್ತಳಕರ್ ಅವರ ವಿರುದ್ಧ ಭಾರೀ ಪ್ರಮಾಣದ ಪ್ರತಿಭಟನೆ ನಡೆದಿತ್ತು. ಡಾ ಶಿವಾನಂದ ಕುಡ್ತಳಕರ್ ವಿರುದ್ಧ ಅನೇಕರು ಆಕ್ರೋಶವ್ಯಕ್ತಪಡಿಸಿದ್ದರು.
ಆ ವೇಳೆ ಕಾರವಾರದಿಂದ ಬೇರೆ ಕಡೆ ವರ್ಗವಾಗಿದ್ದರೂ ಡಾ ಶಿವಾನಂದ ಕುಡ್ತಳಕರ್ ಅವರು ಮತ್ತೆ ಕಾರವಾರಕ್ಕೆ ವರ್ಗಾಯಿಸಿಕೊಂಡು ಬಂದಿದ್ದರು. ಜಿಲ್ಲಾ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಡಾ ಶಿವಾನಂದ ಕುಡ್ತಳಕರ್ ಕಾರವಾರ ಬಿಟ್ಟು ಬೇರೆ ಕಡೆ ಹೋಗಲು ಒಪ್ಪಿರಲಿಲ್ಲ.
ಈ ನಡುವೆ ಸರ್ಕಾರಿ ಆಸ್ಪತ್ರೆಗೆ ಹಾಸಿಗೆ ಹಾಗೂ ಇನ್ನಿತರ ಪೀಠೋಪಕರಣ ಪೂರೈಕೆ ವಿಷಯವಾಗಿ ಡಾ ಶಿವಾನಂದ ಕುಡ್ತಳಕರ್ ಅವರು ಗುತ್ತಿಗೆದಾರ ಮೌಸೀನ್ ಶೇಖ್ ಅವರಿಂದ ಹಣ ಬೇಡಿದ್ದರು. ಒಟ್ಟು 75 ಸಾವಿರ ರೂಪಾಯಿಗೆ ಮಾತುಕಥೆ ನಡೆದಿದ್ದು, ಜುಲೈ 9ರ ರಾತ್ರಿ ಅವರು ಗುತ್ತಿಗೆದಾರ 20 ಸಾವಿರ ರೂ ಹಣಪಡೆದಿದ್ದರು. ಜುಲೈ 10ರ ಬೆಳಗ್ಗೆ ಮತ್ತೆ 30 ಸಾವಿರ ರೂ ಕೊಡುವಂತೆ ಪೀಡಿಸಲು ಶುರು ಮಾಡಿದ್ದರು.
ಪದೇ ಪದೇ ಪೀಡಿಸುತ್ತಿದ್ದ ಡಾ ಶಿವಾನಂದ ಕುಡ್ತಳಕರ್ ವಿರುದ್ಧ ಮೌಸೀನ್ ಶೇಖ್ ಲೋಕಾಯುಕ್ತರ ಮೊರೆ ಹೋದರು. ಹಣ ಸ್ವೀಕರಿಸುವ ವೇಳೆಯಲ್ಲಿಯೇ ಲೋಕಾಯುಕ್ತರು ಡಾ ಶಿವಾನಂದ ಕುಡ್ತಳಕರ್ ಅವರ ಮೇಲೆ ದಾಳಿ ಮಾಡಿದರು. ಅತ್ಯಂತ ಪ್ರಭಾವಿಯಾಗಿರುವ ಡಾ ಶಿವಾನಂದ ಕುಡ್ತಳಕರ್ ಮೇಲೆ ದಾಳಿ ನಡೆಸಲು ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಮನಸ್ಸು ಮಾಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದ ವೈದ್ಯ ಈ ದಿನ ಜೈಲು ಸೇರಿದರು. ಶಿವಾನಂದ ಕುಡ್ತಳಕರ್ ಅವರ ಮನೆಯಲ್ಲಿಯೂ ಲೋಕಾಯುಕ್ತರು ಶೋಧ ನಡೆಸಿದ್ದಾರೆ.
Discussion about this post