ಮುರುಡೇಶ್ವರದಲ್ಲಿ ನವಗ್ರಹ ಹೆಸರಿನ ಯಾಂತ್ರಿಕೃತ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಮೂವರು ದಡ ಸೇರಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಮಾಹಾದೇವ ಹರಿಕಂತ್ರ ಪ್ರಾಣಬಿಟ್ಟಿದ್ದಾರೆ.
ಮುರುಡೇಶ್ವರ ಮಾವಳ್ಳಿಯ ಸೋನಾರಕೇರಿ ನಾಗೇಶ ಹರಿಕಂತ್ರ ಅವರು ತಮ್ಮ ಅಣ್ಣನ ನವಗ್ರಹ ಎಂಬ ದೋಣಿಯಲ್ಲಿ ಜುಲೈ 10ರ ನಸುಕಿನಲ್ಲಿ ಮೀನುಗಾರಿಕೆಗೆ ಹೋಗಿದ್ದರು. ಅಣ್ಣನ ಮಕ್ಕಳಾದ ವೆಂಕಟೇಶ, ಆನಂದ ಹಾಗೂ ಮಾಹಾದೇವ ಅವರು ಆ ದೋಣಿಯಲ್ಲಿದ್ದರು.
ಮುರುಡೇಶ್ವರ ಅರಬ್ಬಿ ಸಮುದ್ರದ ಎಡಬದಿ 100 ಮೀ ದೂರ ಚಲಿಸಿದಾಗ ದೋಣಿಗೆ ರಭಸ ಅಲೆಯೊಂದು ಬಡಿಯಿತು. ಆಗ, ದೋಣಿ ಮುಗುಚಿಬಿದ್ದಿದ್ದು, ಮೀನುಗಾರರೆಲ್ಲರೂ ನೀರಿಗೆ ಬಿದ್ದರು. ಆ ನಾಲ್ವರು ಏಕಕಾಲಕ್ಕೆ ಉಪ್ಪು ನೀರು ಕುಡಿದರು. ಆ ಪೈಕಿ ನಾಗೇಶ ಹರಿಕಂತ್ರ, ವೆಂಕಟೇಶ ಹಾಗೂ ಆನಂದ ಈಜಿ ದಡ ಸೇರಿದರು.
ಆದರೆ, ಮಾವಳ್ಳಿ ಹಿರಿದೋಮಿಯ ಮಾದೇವ ಹರಿಕಂತ್ರ ಅವರ ಬಳಿ ಈಜಲು ಆಗಲಿಲ್ಲ. ನೀರು ಕುಡಿದು ಅವರು ಅಸ್ವಸ್ಥಗೊಂಡು ದಡಕ್ಕೆ ಬಂದರು. ಅವರನ್ನು ಅಲ್ಲಿನ ಆರ್‌ಎನ್‌ಎಸ್ ಆಸ್ಪತ್ರೆಗೆ ದಾಖಲಿಸಿದಾಗ ಅವರು ಸಾವನಪ್ಪಿರುವುದು ಗೊತ್ತಾಯಿತು. ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
Discussion about this post