ರಸ್ತೆಯಲ್ಲಿ ಹೋಗಿ ಬರುವವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಕಿಲಾಡಿ ಜೋಡಿ ಸಯ್ಯದ್ ಮೋಸಿನ್ ಎಂಬತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಅವರಿಬ್ಬರ ವಿಚಾರಣೆ ನಡೆಸಿದಾಗ ಆರೋಪಿತರ ಬಳಿ ಅಪಾರ ಪ್ರಮಾಣದ ಬೆಳ್ಳಿ-ಬಂಗಾರ ಸಿಕ್ಕಿದೆ.
ಭಟ್ಕಳ ಆಜಾದ್ ನಗರದ 2ನೇ ಕ್ರಾಸಿನಲ್ಲಿರುವ ಸಯ್ಯದ್ ಮೋಸಿನ್ ಅವರು ಜುಲೈ 9ರ ಸಂಜೆ ವಾಕಿಂಗ್ ಹೊರಟಿದ್ದರು. ಕೆಎಚ್‌ಬಿ ಕಾಲೋನಿಯಲ್ಲಿ ಅವರು ಹೋಗುತ್ತಿರುವಾಗ ಎದುರಿನಿಂದ ಬಂದ ಇಬ್ಬರು ಅವರನ್ನು ಅಡ್ಡಗಟ್ಟಿದರು. ಭಟ್ಕಳ ತೆಂಗಿನಗುAಡಿಯಲ್ಲಿ ಪೇಂಟಿAಗ್ ಕೆಲಸ ಮಾಡಿಕೊಂಡಿದ್ದ ಹರೀಶ ನಾಯ್ಕ ಅವರು ಹೆಬಳೆಯ ಹೇಮಾ ನಾಯ್ಕ ಅವರ ಜೊತೆಗೂಡಿ ದರೋಡೆ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದರು.
ಸಯ್ಯದ್ ಮೋಸಿನ್ ಅವರನ್ನು ಅಡ್ಡಗಟ್ಟಿದ ಹರೀಶ ನಾಯ್ಕ ಹಾಗೂ ಹೇಮಾ ನಾಯ್ಕ ಮೊಬೈಲನ್ನು ಕಸಿದುಕೊಂಡರು. ಈ ವೇಳೆ ಸಯ್ಯದ್ ಮೋಸಿನ್ ಸಾರ್ವಜನಿಕರ ಸಹಾಯಪಡೆದು ಅವರಿಬ್ಬರನ್ನು ಅಲ್ಲಿಯೇ ಹಿಡಿದರು. ನಂತರ ಸಯ್ಯದ್ ಮೋಸಿನ್ ಪೊಲೀಸರನ್ನು ಕರೆಯಿಸಿದ್ದು, ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗರೆಡ್ಡಿ, ಪಿಎಸ್‌ಐ ಬರಮಪ್ಪ ಬರಗಲಿ ಅಲ್ಲಿಗೆ ಆಗಮಿಸಿದರು.
ಸಿಕ್ಕಿಬಿದ್ದ ಹರೀಶ ನಾಯ್ಕ ಹಾಗೂ ಹೇಮಾ ನಾಯ್ಕ ಅವರನ್ನು ಪೊಲೀಸ ಸಿಬ್ಬಂದಿ ಮಂಜುನಾಥ ಗೊಂಡ, ನಿಂಗನಗೌಡ ಪಾಟೀಲ, ಶಾರದಾ ಗೌಡ, ಮದರ ಸಾಬ್, ಈರಣ್ಣ ಪೂಜೇರಿ, ಮಂಜುನಾಥ ಖಾರ್ವಿ, ಸಾವಿತ್ರಿ ಜಿಸಿ, ಮಂಜುನಾಥ ಪಟಗಾರ ವಿಚಾರಣೆಗೊಳಪಡಿಸಿದರು. ಅವರನ್ನು ಶೋಧಿಸಿದಾಗ ಅಲ್ಲಿ ಇಲ್ಲಿ ದರೋಡೆ ಮಾಡಿದ್ದ 3.24 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ಸಿಕ್ಕಿದವು. 74 ಸಾವಿರ ರೂ ಮೌಲ್ಯದ ಬೆಳ್ಳಿ ಆಭರಣಗಳು ಅವರ ಜೊತೆಯಿದ್ದವು.
ಹರೀಶ ನಾಯ್ಕ ಹಾಗೂ ಹೇಮಾ ನಾಯ್ಕ ಅವರನ್ನು ಪೊಲೀಸರು ಬಂಧಿಸಿ ಅವರ ಬಳಿಯಿದ್ದ ವಸ್ತುಗಳನ್ನು ವಶಕ್ಕೆಪಡೆದರು. ಆರೋಪಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ವರದಿ ಒಪ್ಪಿಸಿದರು.
Discussion about this post