ಮೇಷ ರಾಶಿ: ನಿಮ್ಮ ನಿರಂತರ ಪ್ರಯತ್ನಕ್ಕೆ ಈ ದಿನ ಯಶಸ್ಸು ಲಭಿಸುತ್ತದೆ. ಈ ದಿನ ಸಂಘರ್ಷಣೆ ಸಹಜ. ತಾಳ್ಮೆ ಕಳೆದುಕೊಳ್ಳಬೇಡಿ.
ವೃಷಭ ರಾಶಿ: ನಿಮ್ಮ ಕನಸು ನನಸಾಗುವ ಸಾಧ್ಯತೆಯಿದೆ. ಉತ್ಸಾಹವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಮಾನಸಿಕ ಗೊಂದಲಗಳಿAದ ದೂರವಿರಿ.
ಮಿಥುನ ರಾಶಿ: ಸಂಗಾತಿಯ ಜೊತೆ ಹಣಕಾಸು ವಿಷಯದಲ್ಲಿ ಜಗಳವಾಗುವ ಸಾಧ್ಯತೆಯಿದೆ. ಪಾರದರ್ಶಕವಾಗಿ ದಿನ ಪೂರ್ಣಗೊಳಿಸಿ. ಕೆಲಸದ ಕುರಿತು ಹೆಚ್ಚಿನ ಸಮಯಕೊಡಿ.
ಕರ್ಕಾಟಕ ರಾಶಿ: ಪ್ರೀತಿ-ಪಾತ್ರರ ಜೊತೆ ವಿವಾದವಾಗುವ ಸಾಧ್ಯತೆಯಿದೆ. ಕೆಲಸದಲ್ಲಿ ಬದ್ಧತೆ ಪ್ರದರ್ಶಿಸಿದರೆ ಲಾಭ ಖಚಿತ.
ಸಿಂಹ ರಾಶಿ: ನಿಮ್ಮ ಮನಸ್ಸು ಕೆಲವು ಘಟನೆಗಳಿಂದ ಚಿಂತೆಗೆ ಒಳಪಡುತ್ತದೆ. ಬುದ್ಧಿವಂತಿಕೆಯಿAದ ಮಾಡಿದಂತಹ ಹೂಡಿಕೆಗಳು ಲಾಭವನ್ನು ತರುತ್ತದೆ. ಇಂದಿನ ದಿನ ನೀವು ಸಂಪೂರ್ಣ ಶಾಂತವಾಗಿರಬೇಕು.
ಕನ್ಯಾ ರಾಶಿ: ಆತುರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಹಣಕಾಸಿನ ವಿಚಾರಗಳನ್ನ ಮಾತನಾಡುವಾಗ ಎಚ್ಚರದಿಂದಿರಿ. ಆರೋಗ್ಯದ ಕಡೆ ಸಂಪೂರ್ಣ ಗಮನಹರಿಸಿ.
ತುಲಾ ರಾಶಿ: ಅನವಶ್ಯಕವಾಗಿ ಉದ್ವೇಗ ಹಾಗೂ ಚಿಂತೆ ಮಾನಸಿಕ ಸ್ಥಿರತೆಯನ್ನು ಹಾಳುಮಾಡಲಿದೆ. ಶಾಂತಿ ಕಾಪಾಡಿಕೊಳ್ಳುವುದು ಮುಖ್ಯ. ಸಮಸ್ಯೆಗಳನ್ನು ಜಾಣ್ಮೆಯಿಂದ ನಿಭಾಯಿಸಿ.
ವೃಶ್ಚಿಕ ರಾಶಿ: ಈ ದಿನ ಲಾಭದಾಯಕವಾಗಿದೆ. ಆರ್ಥಿಕ ಲಾಭವೂ ಸಾಧ್ಯ. ಗಳಸಿದ ಹಣವನ್ನು ಅನಗತ್ಯವಾಗಿ ವೆಚ್ಚ ಮಾಡಬೇಡಿ. ಹಣ ವೆಚ್ಚ ಮಾಡಿದರೆ ತೊಂದರೆಯಾಗಬಹುದು.
ಧನು ರಾಶಿ: ಈ ದಿನ ದೈಹಿಕ ಮತ್ತು ಮಾನಸಿಕವಾಗಿ ಒತ್ತಡ ಸಹಜ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಹೊಸ ಅವಕಾಶಗಳನ್ನು ಹುಡುಕಲು ಉತ್ತಮವಾದ ದಿನ.
ಮಕರ ರಾಶಿ: ಆತಂಕದ ಜೀವನ ದೂರವಾಗಲಿದೆ. ಹಣದ ವಿಷಯದಲ್ಲಿ ಹುಷಾರಾಗಿರಿ. ಅನಗತ್ಯ ಸಾಲ ಕೊಡಬೇಡಿ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ ರಾಶಿ: ಸಾಲದಿಂದ ಮುಕ್ತಿ ಸಿಗಲಿದೆ. ಕೆಲಸದ ಒತ್ತಡವಿದ್ದರೂ ಚಿಂತೆ ಇಲ್ಲ. ಸಂತೋಷದಿoದ ಜೀವನ ಕಳೆಯುವಿರಿ. ಆತುರದ ನಿರ್ಧಾರ ಮಾಡಬೇಡಿ.
ಮೀನ ರಾಶಿ: ತಂದೆ ತಾಯಿ ಮಕ್ಕಳ ಆರೋಗ್ಯಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡ ಬೇಕಾಗಬಹುದು. ಈ ವಿಷಯ ಹಣಕಾಸಿನ ಸ್ಥಿತಿಯನ್ನು ಹದಗೆಡಿಸುತ್ತದೆ. ಈ ದಿನ ಯಾರನ್ನು ಅತಿಯಾಗಿ ನಂಬುವುದು ಬೇಡ.
Discussion about this post