ಕಾರವಾರದ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ನಡೆದ ಅವ್ಯವಹಾರಗಳಿಗೆ ಸಂಬoಧಿಸಿ ಸೊಸೈಟಿ ಅಧ್ಯಕ್ಷ ಲಿಂಗರಾಜು ಕಲ್ಗುಟ್ಕರ್ ಜೊತೆ ಉಳಿದ 30 ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ರಾಜ್ಯ ಸೌಹಾರ್ದ ಸಹಕಾರಿ ನಿಯಮಿತದ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಸoತೋಷಕುಮಾರ ಅವರು ಚಿತ್ತಾಕುಲ ಪೊಲೀಸ್ ಠಾಣೆಗೆ ತೆರಳಿ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. `ಸದಾಶಿವಗಡದ ತಾರಿವಾಡದಲ್ಲಿರುವ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ. ಠೇವಣಿದಾರರ ಹಣವನ್ನು ಸೊಸೈಟಿ ಮರಳಿಸಿಲ್ಲ’ ಎಂಬುದು ದೂರು.
`ಆಡಳಿತ ಮಂಡಳಿ ನಿರ್ದೇಶಕರು, ಪದಾಧಿಕಾರಿಗಳು, ಮಾಜಿ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಿಬ್ಬಂದಿ ಸೇರಿ 407002400ರೂ ಅಕ್ರಮ ನಡೆಸಿದ್ದಾರೆ. ಆ ಮೂಲಕ ಠೇವಣಿದಾರರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ. 2020-21ರ ಸಾಲಿನಿಂದ 2025ರ ಜೂನ್ 30ರವರೆಗೆ ಈ ಅವ್ಯವಹಾರ ನಡೆದಿದೆ’ ಎಂದು ಸಂತೋಷಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ. ಅಡಾವೆ ಪತ್ರಿಕೆ ಪರಿಶೀಲನೆ ಹಾಗೂ ಮದ್ಯಂತರ ವರದಿ ಗಮನಿಸಿದಾಗ ಈ ಅವ್ಯವಹಾರ ಗೊತ್ತಾದ ಬಗ್ಗೆ ಅವರು ಹೇಳಿದ್ದಾರೆ.
Discussion about this post