ಶಿರಸಿಯ ದೊಡ್ನಳ್ಳಿ ಬಳಿಯ ಬಕ್ಕಳಕೊಪ್ಪದಲ್ಲಿ ಗುರುವಾರ ರಾತ್ರಿ ಕೊಲೆ ನಡೆದಿದೆ. ಅಲ್ಲಿನ ಬಸವರಾಜ ನಾಯ್ಕ ಎಂಬಾತರು ತಮ್ಮ ಅತ್ತೆಯನ್ನು ಬಡಿಗೆಯಿಂದ ಬಡಿದು ಕೊಂದಿದ್ದಾರೆ.
ಬಸವರಾಜ ನಾಯ್ಕ (42) ಹಾಗೂ ಅವರ ಅತ್ತೆ ಕಮಲಾ ನಾಯ್ಕ (70) ನಡುವೆ ನಿತ್ಯವೂ ಜಗಳವಾಗುತ್ತಿತ್ತು. ಸಣ್ಣ ಸಣ್ಣ ವಿಷಯಗಳಿಗೂ ಅವರಿಬ್ಬರು ಕಿತ್ತಾಡುತ್ತಿದ್ದರು. ಇದರಿಂದ ಬೇಸತ್ತ ಬಸವರಾಜ ನಾಯ್ಕ ಗುರುವಾರ ರಾತ್ರಿ ಬಡಿಗೆಯಿಂದ ಅತ್ತೆಯ ತಲೆಗೆ ಬಡಿದಿದ್ದು, ಕಮಲಾ ನಾಯ್ಕ ಅವರು ಅಲ್ಲಿಯೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ADVERTISEMENT
ಕೊಲೆ ನಂತರ ಬಸವರಾಜ್ ನಾಯ್ಕ ಇದನ್ನು ಸಹಜ ಸಾವು ಎಂದು ಬಿಂಬಿಸಲು ಹೊರಟಿದ್ದು, ಇದನ್ನು ಬಸವರಾಜ ನಾಯ್ಕರ ಪತ್ನಿ ಒಪ್ಪಿಲ್ಲ. ತಾಯಿಯನ್ನು ಕೊಲೆ ಮಾಡಿದ ಪತಿ ವಿರುದ್ಧ ಅವರು ಪೊಲೀಸ್ ದೂರು ನೀಡಿದರು. ಪೊಲೀಸರು ಬಸವರಾಜ ನಾಯ್ಕ ಅವರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ.
ADVERTISEMENT
ಡಿವೈಎಸ್ಪಿ ಗೀತಾ ಪಾಟೀಲ. ಪಿಐ ಮಂಜುನಾಥ ಗೌಡ ಹಾಗೂ ಪಿಎಸ್‌ಐ ಸಂತೋಷಕುಮಾರ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿ ಸಂಗ್ರಹಿಸಿದ್ದಾರೆ.
Discussion about this post