ಬೆಂಗಳೂರಿನಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಾರವಾರದ ಸ್ಪರ್ಧಿಗಳು ರಾಜ್ಯಕ್ಕೆ ಮೊದಲ ಸ್ಥಾನಪಡೆದಿದ್ದಾರೆ.
ಜುಲೈ 4ರಿಂದ 6ರವರೆಗೆ ಬೆಂಗಳೂರಿನ Force 1 ರಿಂಕ್’ನಲ್ಲಿ KRSA ಹಾಕಿ ಲೀಗ್ 2025ರ 3ನೇ ಸೀಸನ್ ನಡೆಯಿತು. ಒಟ್ಟು 9 ತಂಡಗಳು ಇದರಲ್ಲಿ ಭಾಗವಹಿಸಿದ್ದು, ಕಾರವಾರದ ಕೊಂಕಣ ಟೈಗರ್ಸ ತಂಡದವರು ಎಲ್ಲಾ ತಂಡದವರನ್ನು ಮಣಿಸಿ ಮೊದಲ ಬಹುಮಾನ ಸ್ವೀಕರಿಸಿದರು. ಉತ್ತರ ಕನ್ನಡದ ಪ್ರತಿಭೆಯನ್ನು ಒಳಗೊಂಡ ಬೆಂಗಳೂರು ಬುಲ್ಸ್ ತಂಡದವರು ಸಹ 3ನೇ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಸ್ಕೇಟಿoಗ್ ತರಬೇತುದಾರ ದಿಲೀಪ ಹಣಬರ್ ಹಾಗೂ ಹಣಬರ್ ಸ್ಕೇಟಿಂಗ್ ಇನ್ಸಟ್ಯೂಟ್ ಮಾರ್ಗದರ್ಶನದಲ್ಲಿ ಒಟ್ಟು 4 ತಂಡದವರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೈಸೂರು ವಾರಿಯರ್ಸ್, ಶಿರಸಿ ಮಾರಿಕಾಂಬಾ ಹಾಗೂ ಬೆಂಗಳೂರು ಬುಲ್ಸ್ ತಂಡದವರಿಗೆ ಸಹ ದಿಲೀಪ ಹಣಬರ್ ಅವರು ತರಬೇತಿ ನೀಡಿದ್ದು, ಈ ತಂಡದವರು ಅತ್ಯದ್ಬುತ ಪ್ರದರ್ಶನ ನೀಡಿದರು. ಅಂತಿಮ ಸುತ್ತಿನಲ್ಲಿ ಕೊಂಕಣ ಟೈಗರ್ಸ ತಂಡದವರು ಪ್ರಥಮ ಬಹುಮಾನ ಗೆದ್ದರು. ತುಮಕೂರು ಕಿಲ್ಲರ್ಸ್ ತಂಡ ಎರಡನೇ ಸ್ಥಾನಪಡೆದರು. ಬೆಂಗಳೂರು ಬುಲ್ಸ್ ತಂಡದವರು ಮೂರನೇ ಬಹುಮಾನ ಸ್ವೀಕರಿಸಿದರು.
ಈ ಸಾಧನೆಗೆ ಸಹಾಯ ಮಾಡಿದ ತರಬೇತುದಾರರಿಗೆ ಸ್ಪರ್ಧಾಳುಗಳು ಕೃತಜ್ಞತೆ ಸಲ್ಲಿಸಿದರು. ಸ್ಪರ್ಧಾಳುಗಳ ಪಾಲಕರು ಸಹ ಸಂತಸವ್ಯಕ್ತಪಡಿಸಿ ಮಕ್ಕಳ ಭವಿಷ್ಯಕ್ಕೆ ಶುಭಕೋರಿದರು. `ಸ್ಪರ್ಧಾತ್ಮಕ ಮನೋಭಾವನೆಯ ಈ ಕ್ರೀಡಾಕೂಟ ಮಕ್ಕಳಲ್ಲಿ ಶಿಸ್ತು ಮೂಡಿಸಿದೆ. ಶಾರೀರಿಕ ಸಾಮರ್ಥ್ಯವನ್ನು ಹೆಚ್ಚಿಸಿದೆ’ ಎಂದು ಪಾಲಕರು ಅನಿಸಿಕೆ ಹಂಚಿಕೊoಡರು.
Discussion about this post