ಮೇಷ ರಾಶಿ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದರೆ ಮಾನಸಿಕ ಶಾಂತಿ ಸಿಗುತ್ತದೆ. ಧಾನ-ಧರ್ಮ ಮಾಡಿ. ಮಾತನಾಡುವಾಗ ಎಚ್ಚರಿಕೆಯಿರಲಿ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ. ಕೆಲಸದಲ್ಲಿ ನಿರ್ಲಕ್ಷ ಒಳಿತಲ್ಲ.
ವೃಷಭ ರಾಶಿ: ಈ ದಿನ ಶುರು ಮಾಡಿದ ಸಣ್ಣ ಪ್ರಮಾಣದ ಉದ್ಯೋಗ ಸಹ ಹೆಚ್ಚಿಲ ಗಳಿಕೆ ನೀಡಲು ಸಾಧ್ಯ. ಮನೆ ಖರೀದಿ ಅಥವಾ ಭೂಮಿ ಖರೀದಿ ವಿಷಯದಲ್ಲಿ ಈ ದಿನ ಒಪ್ಪಂದ ಮಾಡಿಕೊಳ್ಳಬೇಡಿ.
ಮಿಥುನ ರಾಶಿ: ಕೆಲಸದ ಒತ್ತಡ ಸಹಜ. ಹಣಕಾಸು ವಿಷಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಬರಲಿದೆ. ದೇವರ ಸ್ಮರಣೆ ಮಾಡಿ
ಕರ್ಕಾಟಕ ರಾಶಿ: ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ಅಗತ್ಯ. ಬೇರೆಯವರನ್ನು ಮೆಚ್ಚಿಸಲು ಸಮಯ – ಹಣ ಹಾಳು ಮಾಡಬೇಡಿ. ಬೆಲೆ ಬಾಳುವ ವಸ್ತುಗಳ ಬಗ್ಗೆ ಅಸಡ್ಡೆ ಮಾಡಿದರೆ ಅದು ಕಣ್ಮರೆಯಾಗುವ ಸಾಧ್ಯತೆಯಿದೆ.
ಸಿಂಹ ರಾಶಿ: ಪ್ರವಾಸ ಮಾಡುವ ಸಾಧ್ಯತೆ ಹೆಚ್ಚಿದೆ. ಅದರಿಂದ ಮನಸ್ಸಿಗೆ ಆನಂದ ಸಿಗಲಿದೆ. ದುಂದು ವೆಚ್ಚ ಮಾಡಬೇಡಿ.
ಕನ್ಯಾ ರಾಶಿ: ನಿಮ್ಮ ಆರೋಗ್ಯದ ಮೇಲೆ ಎಚ್ಚರ ವಹಿಸಿ. ನ್ಯಾಯಾಲಯ ಪ್ರಕರಣದಲ್ಲಿ ವಿಜಯ ಸಾಧಿಸುವ ಸಾಧ್ಯತೆ ಇದೆ. ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಕುಟುಂಬದಲ್ಲಿ ಕಲಹ ಆಗದಂತೆ ನೋಡಿಕೊಳ್ಳಿ.
ತುಲಾ ರಾಶಿ: ಭೂಮಿಗೆ ಸಂಬAಧಿಸಿದ ಹೂಡಿಕೆ ಲಾಭ ತರಲಿದೆ. ಆಭರಣ ಹಾಗೂ ಬಟ್ಟೆ ವ್ಯಾಪಾರಿಗಳಿಗೂ ಲಾಭವಿದೆ. ನಿಮ್ಮ ಮಾತುಗಳ ಮೇಲೆ ಎಚ್ಚರವಿರಲಿ.
ವೃಶ್ಚಿಕ ರಾಶಿ: ಸ್ವಲ್ಪ ಮಟ್ಟಿಗೆ ಭಯದ ವಾತಾವರಣ ನಿಮ್ಮನ್ನು ಸುತ್ತುವರೆಯಲಿದೆ. ಧೈರ್ಯದಿಂದ ಮುನ್ನಡೆಯಿರಿ. ಆರೋಗ್ಯದ ಮೇಲೆ ಕಾಳಜಿಯಿರಲಿ. ವಿದೇಶ ಪ್ರಯಾಣಕ್ಕೆ ಯೋಗ್ಯ ಸಮಯವಲ್ಲ.
ಧನು ರಾಶಿ: ದಾನ-ಧರ್ಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಅದು ಉತ್ತಮ ಫಲ ನೀಡಲಿದೆ. ಸಂಗಾತಿ ಜೊತೆ ಮನಸ್ತಾಪ ಬೇಡ. ನಿರ್ಲಕ್ಷತನದಿಂದ ಕೆಲ ಸಮಸ್ಯೆ ಬರುವ ಸಾಧ್ಯತೆಯಿದೆ.
ಮಕರ ರಾಶಿ: ವಾಹನ ಚಲಾಯಿಸುವಾಗ ಎಚ್ಚರಿಕೆವಹಿಸಿ. ಹೊಸ ಉದ್ಯೋಗ ಶುರು ಮಾಡುವಾಗ ಅನುಭವಿಗಳ ಸಲಹೆ ಪಡೆಯುವುದು ಸೂಕ್ತ.
ಕುಂಭ ರಾಶಿ: ಹತಾಶೆಯ ಮನೋಭಾವನೆಯಿಂದ ದೂರವಿರಿ. ಆಭರಣಗಳಲ್ಲಿ ಹೂಡಿಕೆ ಮಾಡಿದರೆ ನಿಮಗೆ ಲಾಭವಿದೆ. ಯೋಗ್ಯರಿಗೆ ಮಾತ್ರ ಸಹಾಯ ಮಾಡಿ. ದಾನ-ಧರ್ಮ ಮಾಡುವಾಗ ಸಹ ಯೋಗ್ಯರನ್ನು ಆರಿಸಿ.
ಮೀನ ರಾಶಿ: ಕೆಲಸದಲ್ಲಿ ಒತ್ತಡ ಸಹಜ. ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ವೈದ್ಯರನ್ನು ಭೇಟಿ ಮಾಡಿ. ಬಾಕಿ ಸಾಲ ಪಾವತಿಗೆ ಸೂಕ್ತ ದಿನ
Discussion about this post