ಜೀವನದಲ್ಲಿ ಜಿಗುಪ್ಸೆ ಹೊಂದಿದ ಯಲ್ಲಾಪುರದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸರು ಆತನ ಮನೆ ಶೋಧ ನಡೆಸಿದ್ದಾರೆ.
ಪಟ್ಟಣದ ಶಾರದಾಗಲ್ಲಿಯಲ್ಲಿ ರೋಹನ್ ನೇತ್ರೇಕರ್ ವಾಸವಾಗಿದ್ದರು. 27ವರ್ಷದ ಅವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೆಲ ದಿನಗಳಿಂದ ಮಂಕಾಗಿದ್ದರು. ತಮ್ಮ ಬೇಸರಕ್ಕೆ ಕಾರಣ ಏನು? ಎಂದು ಯಾರಲ್ಲಿಯೂ ಹೇಳಿರಲಿಲ್ಲ.
ADVERTISEMENT
ಜುಲೈ 10ರ ರಾತ್ರಿ 10ಗಂಟೆಗೆ ಮನೆಯೊಳಗಿನ ಬೆಡ್ ರೂಮಿಗೆ ಹೋದ ಅವರು ಬಾಗಿಲು ಹಾಕಿಕೊಂಡರು. ಅಲ್ಲಿನ ಸೀಲಿಂಗ್ ಹುಕ್ಕಿಗೆ ಸೀರೆ ಕಟ್ಟಿಕೊಟ್ಟು ಕುತ್ತಗೆಗೆ ಸಿಕ್ಕಿಸಿಕೊಂಡರು. ಆ ಮೂಲಕ ನೇಣು ಹಾಕಿಕೊಂಡು ಅವರು ಆತ್ಮಹತ್ಯೆಗೆ ಶರಣಾದರು.
ರೋಹನ್ ನೇತ್ರೇಕರ್ ಅವರ ಆತ್ಮಹತ್ಯೆಯಿಂದ ಕುಟುಂಬದವರು ಕುಗ್ಗಿದ್ದರು. ರೋಹನ್ ಅವರ ತಂದೆ ರಾಜು ನೇತ್ರೇಕರ್ ಅವರು ಮಗನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳ ಶೋಧ ನಡೆಸಿದ್ದು, ಆತ್ಮಹತ್ಯೆಗೆ ಕಾರಣ ಈವರೆಗೂ ಗೊತ್ತಾಗಿಲ್ಲ.
ADVERTISEMENT
ಗಮನಿಸಿ: ಸಮಸ್ಯೆಗಳನ್ನು ಸಮಾಧಾನದಿಂದ ಬಗೆಹರಿಸಿಕೊಳ್ಳಿ. ಆತ್ಮಹತ್ಯೆ ಅಪರಾಧ
Discussion about this post