ಮೇಷ ರಾಶಿ: ಆರ್ಥಿಕ ಜೀವನದಲ್ಲಿ ಯಾವುದೇ ಸುಧಾರಣೆ ಇರುವುದಿಲ್ಲ. ಹಣದ ವಿಷಯದಲ್ಲಿ ಕುಟುಂಬದಲ್ಲಿ ಗೊಂದಲ ಸಹಜ. ದಿನವಿಡೀ ನಿರಾಸೆ. ಧೈರ್ಯ ಕಳೆದುಕೊಳ್ಳದಿರಿ.
ವೃಷಭ ರಾಶಿ: ಹೃದಯ ರೋಗಿಗಳು ಆರೋಗ್ಯದ ಕಡೆ ಗಮನಕೊಡಬೇಕು. ಹಣ ವ್ಯರ್ಥವಾಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ವರ್ತನೆಯೇ ನಿಮಗೆ ಸಮಸ್ಯೆ ತರಲಿದೆ. ತಾಳ್ಮೆಯಿಂದ ವರ್ತಿಸಿ.
ಮಿಥುನ ರಾಶಿ: ಈ ದಿನ ಸಂದಿಗ್ಧ ಪರಿಸ್ಥಿತಿ ಎದುರಾಗಬಹುದು. ಅದರಿಂದ ಹೆದರುವುದು ಬೇಡ. ಭೂಮಿಯ ಮೇಲಿನ ಹೂಡಿಕೆ ನಿಮಗೆ ಲಾಭ ತರುವ ಸಾಧ್ಯತೆಯಿದೆ.
ಕರ್ಕಾಟಕ ರಾಶಿ: ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರಿಕೆಯಿಂದ ಇರಿ. ಹಣ ಲಾಭವಾಗುವ ಸಾಧ್ಯತೆ ಇದೆ. ಮಾನಸಿಕ ಶಾಂತಿ ಸಿಗಲಿದೆ.
ಸಿಂಹ ರಾಶಿ: ನಿಮ್ಮ ವ್ಯಕ್ತಿತ್ವ ಬೇರೆಯವರ ಗಮನಸೆಳೆಯಲಿದೆ. ಯಾರಿಗೂ ಈ ದಿನ ಸಾಲ ಕೊಡಬೇಡಿ. ಕುಟುಂಬದವರ ಜೊತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ. ದೇವಾಲಯ ಭೇಟಿ ನಿಮ್ಮ ದಿನವನ್ನು ಉತ್ತಮವಾಗಿಸಲಿದೆ.
ಕನ್ಯಾ ರಾಶಿ: ಆರೋಗ್ಯ ಕಾಪಾಡಿಕೊಳ್ಳಲು ವಿಶ್ರಾಂತಿ ಅಗತ್ಯ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ಅನಗತ್ಯವಾಗಿ ಸಾಲ ಕೊಡಬೇಡಿ. ದೂರ ಪ್ರಯಾಣವೂ ಬೇಡ.
ತುಲಾ ರಾಶಿ: ನಿಮ್ಮಲ್ಲಿನ ಬಹುತೇಕ ಸಮಸ್ಯೆಗಳಿಗೆ ಈ ದಿನ ಉತ್ತರ ಸಿಗಲಿದೆ. ಹಣ ವೆಚ್ಚವಾಗುವುದು ಸಹಜ. ಮಾಡಿದ ಒಳ್ಳೆಯ ಕೆಲಸಕ್ಕೆ ಜನರ ಮೆಚ್ಚುಗೆ ಸಿಗುತ್ತದೆ.
ವೃಶ್ಚಿಕ ರಾಶಿ: ಬುದ್ಧಿಶಕ್ತಿ ಹಾಗೂ ದೈಹಿಕ ಶಕ್ತಿಯನ್ನು ಸಕಾರಾತ್ಮಕವಾಗಿ ವಿನಯೋಗಿಸಿಕೊಳ್ಳಿ. ಪೋಷಕರ ಬೆಂಬಲದಿAದ ನಿಮಗೆ ಹಣಕಾಸು ಸಮಸ್ಯೆ ನಿವಾರಣೆಯಾಗಲಿದೆ. ಆರೋಗ್ಯವೂ ಸುಧಾರಿಸಲಿದೆ.
ಧನು ರಾಶಿ: ಮಾತನಾಡುವ ಮುನ್ನ ಯೋಜಿಸಿ. ತಿಳಿಯದೇ ತಪ್ಪು ಅಭಿಪ್ರಾಯ ಮಂಡಿಸುವ ಸಾಧ್ಯತೆ ಹೆಚ್ಚಿದೆ. ಬೇರೆಯವರ ಭಾವನೆಗಳಿಗೆ ಧಕ್ಕೆ ಮಾಡಬೇಡಿ. ನಿಮ್ಮಲ್ಲಿನ ಸಮಸ್ಯೆ ಕ್ಷಣಿಕವಾಗಿದ್ದು, ಅವರು ದೂರವಾಗುತ್ತದೆ.
ಮಕರ ರಾಶಿ: ಬೆಳಗ್ಗಿನ ಅವಧಿ ಚನ್ನಾಗಿದ್ದರೂ ಸಂಜೆ ವೇಳೆ ಹಣ ವೆಚ್ಚವಾಗಲಿದೆ. ಇದರಿಂದ ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ.
ಕುಂಭ ರಾಶಿ: ದಿನವಿಡಿ ಒತ್ತಡವಿದ್ದರೂ ಆರೋಗ್ಯದಲ್ಲಿ ಸಮಸ್ಯೆ ಇಲ್ಲ. ಮನರಂಜನೆಗಾಗಿ ಹೆಚ್ಚು ಸಮಯ ಹಾಗೂ ಹಣ ವೆಚ್ಚ ಮಾಡಬೇಡಿ. ಮನಸ್ಸಿನ ಮೇಲೆ ನಿಯಂತ್ರಣವಿರಲಿ.
ಮೀನ ರಾಶಿ: ಆಹಾರ ಸೇವನೆಯಲ್ಲಿ ವಿಶೇಷ ಮುನ್ನೆಚ್ಚರಿಕೆ ಅಗತ್ಯ. ಮಾನಸಿಕ ಉದ್ವೇಗಕ್ಕೆ ಒಳಗಾಗಬೇಡಿ. ಅನಗತ್ಯ ಒತ್ತಡದ ಕೆಲಸವೂ ಬೇಡ. ಆರ್ಥಿಕವಾಗಿ ಲಾಭವಾಗಲಿದೆ.
Discussion about this post